ಬೆಳ್ತಂಗಡಿ:(ಫೆ.7) ಕಡಿರುದ್ಯಾವರ ಗ್ರಾಮದ ಕನಪಾಡಿ-ಇಂದಬೆಟ್ಟು ಕ್ರಾಸ್ ಸಮೀಪ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಇದನ್ನೂ ಓದಿ: ಮಂಜೊಟ್ಟಿ: ಸ್ಟಾರ್ ಲೈನ್ ಶಾಲೆಗೆ ಎಸ್.ಜೆ.ಎಂ ರಾಜ್ಯಾಧ್ಯಕ್ಷ ಜೆಪ್ಪು ಉಸ್ತಾದ್ ಭೇಟಿ
ಕಡಿರುದ್ಯಾವರದ ಅಂತರ ಲೋಕಪ್ಪ ಗೌಡ(65) ಗಾಯಗೊಂಡ ವ್ಯಕ್ತಿ.
ದಿಡುಪೆ ಮೂಲದ ವ್ಯಕ್ತಿ ಬೈಕ್ ಅನ್ನು ಚಲಾಯಿಸಿಕಂಡು ಬರುತ್ತಿರುವಾಗ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾರೆ. ಗಾಯಾಳುವಿಗೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.




