ಬೆಳ್ತಂಗಡಿ: ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಮುಂಡಾಜೆಯಲ್ಲಿ ಸಂಭ್ರಮದ ಈದುಲ್ ಫಿತರ್

ಬೆಳ್ತಂಗಡಿ: ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಮುಂಡಾಜೆಯಲ್ಲಿ ಸಂಭ್ರಮದ ಈದುಲ್ ಫಿತರ್ ಹಬ್ಬ ಆಚರಿಸಲಾಯಿತು.

ಖುತುಬಾ ಪಾರಾಯಣ ಮತ್ತು ಪೆರ್ನಾಲ್ ನಮಾಝ್ ಗೆ ನೇತೃತ್ವವನ್ನು ಖತೀಬ್ ಉಸ್ತಾದ್ ಸಿರಾಜುದ್ದೀನ್ ಸ‌ಅದಿ ಗಡಿಯಾರ್ ವಹಿಸಿದ್ದರು.


ಸದರ್ ಉಸ್ತಾದ್ ತ್ವಾಹಿರ್ ಸ‌ಅದಿ ನಾವೂರು ಸಹಕಾರ ನೀಡಿದರು.
ಕಳೆದ 6 ತಿಂಗಳಿನಿಂದ ಕ್ರಮವಾಗಿ ಬೆಳಗ್ಗೆ ಮತ್ತು ಇಶಾಅ್ ನಮಾಝ್ ಗೆ ಆಗಮಿಸಿದ 9ನೇ ತರಗತಿ ವಿದ್ಯಾರ್ಥಿಗಳಾದ ಅಮಾನ್ ಮತ್ತು ಮುಹಮ್ಮದ್ ಶಾಝಿನ್ ಅವರಿಗೆ ವಿಶೇಷ ನಗದು ಪುರಸ್ಕಾರ ನೀಡಲಾಯಿತು.

ಎಲ್ಲಾ ದಿವಸಗಳಲ್ಲಿ ತರಾವೀಹ್ ನಮಾಝ್ ಗೆ ಆಗಮಿಸಿದ ಜಮಾಅತ್ ‌ನ ಹಿರಿಯರಾದ ಹಾಜಬ್ಬ ಸಿ, ಬಾವಾಕ ಬೆಳಾಲ್ ಮತ್ತು ಉಮರಬ್ಬ ಕನ್ಯಾಡಿ ಅವರನ್ನು ಶಾಲು ಹೊದಿಸಿ ನಗದಿನೊಂದಿಗೆ ಪುರಸ್ಕಾರಿಸಲಾಯಿತು.
ಮದರಸ ವಿದ್ಯಾರ್ಥಿ ಮುಹಮ್ಮದ್ ಶುಜಾಹ್ ಅವರನ್ನೂ ನಗದಿನೊಂದಿಗೆ ಗುರುತಿಸಲಾಯಿತು.
ಈ ನಗದು ಬಹುಮಾನಗಳನ್ನು ಜಮಾಅತ್ ಅಧ್ಯಕ್ಷ, ಯುವ ಉದ್ಯಮಿ ಅಬ್ದುಲ್ ಬಶೀರ್ ನೆಕ್ಕರೆ ಪ್ರಾಯೋಜಿಸಿದರು.


ಕಾರ್ಯಕ್ರಮ ದಲ್ಲಿ ಕೆ.ಯು ಮುಹಮ್ಮದ್ ಸಖಾಫಿ, ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಶುಭ ಕೋರಿದರು.
ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್ ಸಹಿತ ಜಮಾಅತ್ ಬಾಂಧವರು, ಕಮಿಟಿ‌ ಪದಾಧಿಕಾರಿಗಳು, ಎಸ್ ಬಿ ಎಸ್, ಎಸ್ ವೈ ಎಸ್ , ಎಸ್ಸೆಸ್ಸೆಫ್, ಕೆಎಂಜೆ ಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎಲ್ಲರೂ ಆಲಿಂಗಿಸಿಕೊಂಡು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

Discover more from U Plus TV

Subscribe now to keep reading and get access to the full archive.

Continue reading