ಉಜಿರೆ: ದಕ್ಷಿಣ ಕನ್ನಡ ಜಿಲ್ಲೆಯ ನೃತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ನೃತ್ಯ ಸಂಸ್ಥೆ ‘ಹಿಪ್-ಬಾಯ್ಸ್ ಡಾನ್ಸ್ ಕ್ರೀವ್ (Hip-Boys Dance Crew) ಉಜಿರೆ’ ಈಗ ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿ ದಶಮಾನೋತ್ಸವದ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಮೊದಲ ಅಧಿಕೃತ ಪೋಸ್ಟರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಗೊಂಡಿತು.

ದಿನಾಂಕ 20-03-2026ರಂದು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದಲ್ಲಿ ದಶಮಾನೋತ್ಸವ ಕಾರ್ಯಕ್ರಮದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಪೋಸ್ಟರ್ ಅನಾವರಣಗೊಳಿಸಿ, ತಂಡದ ಮುಂದಿನ ಹಾದಿಗೆ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ‘ರೈಡಿಂಗ್ ಜೋಡಿ’ ಖ್ಯಾತಿಯ ಶ್ಯಾಮ್ ಪ್ರಸಾದ್, ಹಿಪ್-ಬಾಯ್ಸ್ ತಂಡದ ಸದಸ್ಯರು, ನೃತ್ಯಪಟುಗಳ ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿದರು.

ಹತ್ತು ವರ್ಷಗಳ ಸಾರ್ಥಕ ಪಯಣ ಮುಗಿಸಿರುವ ಹಿಪ್-ಬಾಯ್ಸ್ ತಂಡವು ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲು ಸಜ್ಜಾಗಿದೆ.








