ಬೆಳ್ತಂಗಡಿ: ಉರುವಾಲು ಗ್ರಾಮದ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಕಾರಿಂಜ ಬಾಯ್ತಾರು ಇಲ್ಲಿಯ ಭಜನಾ ಮಂಡಳಿಯ ವಿದ್ಯಾರ್ಥಿಗಳ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಶ್ರೀ ವಿಘ್ನೇಶ್ವರ ಭಜನಾ ಮಂಡಳಿಯ ಗೌರವ ಸಲಹೆಗಾರರಾದ ಶ್ರೀ ಡೀಕಯ್ಯ ಸಿ ತೇಜಸ್ವಿ ಆನಡ್ಕ ದೀಪ ಬೆಳಗಿಸಿ, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ವಿದ್ಯಾರ್ಥಿಗಳು ಭಜನೆಗೆ ಬರುವಾಗ ಶಿಸ್ತು,ನಿಯಮ, ಸಮಯ ಪಾಲನೆಯನ್ನು ಮಾಡಬೇಕು.


ಭಜನೆಯಿಂದ ಇನ್ನಷ್ಟು ಶಕ್ತಿ ಉತ್ತಮವಾದ ಸಂಸ್ಕೃತಿ, ಸಂಸ್ಕಾರ, ಕೂಡ ವಿದ್ಯಾರ್ಥಿಗಳಲ್ಲಿ ಬರುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಭಜನಾ ಮಂಡಳಿ ಅಧ್ಯಕ್ಷರಾದ ಗೋಪಾಲ ಕೃಷ್ಣ ಗೌಡ , ಉಪಾಧ್ಯಕ್ಷರಾದ ಓಬಯ್ಯ ಪೂಜಾರಿ ಕಾರಿಂಜ,


ಸದಸ್ಯರಾದ ವಸಂತ ಸಾಲ್ಯಾನ್ ಆನಡ್ಕ, ರಾಮಣ್ಣ ಗೌಡ ನೀನಿ, ಜಗನ್ನಾಥ ರೈ , ರಾಮಣ್ಣ ನಾಯ್ಕ , ವಸಂತ ಗೌಡ ಅಲೈಮಾರು, ಮಹೇಶ್ ಅಡೆಂಕಿಲಪಳಿಕೆ, ಪ್ರದೀಪ್ ನಾಯ್ಕ ಆನಡ್ಕ,ಯಶ್ವಿತ್ ರೈ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರವೀಣ್ ಕುಮಾರ್ ಸ್ವಾಗತಿಸಿ ವಂದಿಸಿದರು.







