ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದ ಕಂಬಳೋತ್ಸವದ ಸಂಭ್ರಮದ ನಡುವೆ ಅಚಾತುರ್ಯವೊಂದು ಸಂಭವಿಸಿದೆ. ಆದರೆ, ಇಲ್ಲೊಬ್ಬ ಬಾಲಕನ ಅಪ್ರತಿಮ ಸಾಹಸದಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಂಬಳದ ಕೋಣಗಳನ್ನು ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದ ವೇಳೆ, ಅಲ್ಲಿಯೇ ಇದ್ದ ಬಾಲಕನೊಬ್ಬ ಆಕಸ್ಮಿಕವಾಗಿ ನದಿಯ ಆಳವಾದ ನೀರಿನಲ್ಲಿ ಮುಳುಗಲಾರಂಭಿಸಿದ್ದಾನೆ. ಇದನ್ನು ಗಮನಿಸಿದ ಕೂಡಲೇ ಅಲ್ಲಿಯೇ ಇದ್ದ ರಕ್ಷಿತ್ ಎಂಬ ಬಾಲಕ ಕ್ಷಣಾರ್ಧವೂ ಯೋಚಿಸದೆ ನದಿಗೆ ಹಾರಿದ್ದಾನೆ.
ಬಾಲಕ ರಕ್ಷಿತ್ನ ಈ ಶ್ಲಾಘನೀಯ ಕಾರ್ಯದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಥಳದಲ್ಲೇ ರಕ್ಷಿತ್ನನ್ನು ಭೇಟಿಯಾಗಿ ಅಭಿನಂದಿಸಿದರು.


ರಕ್ಷಿತ್ಗೆ ಶಾಲು ಹೊದಿಸಿ, ಅವನ ಧೈರ್ಯವನ್ನು ಮೆಚ್ಚಿ ಸನ್ಮಾನಿಸಲಾಯಿತು. ಕಿರಿಯ ವಯಸ್ಸಿನಲ್ಲೇ ರಕ್ಷಿತ್ ತೋರಿದ ಈ ಧೈರ್ಯ ಎಲ್ಲರಿಗೂ ಮಾದರಿ” ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.






