ಮುಲ್ಕಿ:(ಡಿ.24) ಹಳೆಯಂಗಡಿ ರೈಲ್ವೇ ಗೇಟ್ ಬಳಿ ರೈಲು ಬರುವ ಕೆಲವೇ ಕ್ಷಣಗಳಲ್ಲಿ ಪಿಕಪ್ ವಾಹನ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ರೈಲ್ವೇ ಗೇಟ್ ಗೆ ಡಿಕ್ಕಿಯಾಗಿದ್ದು ಭಾರೀ ಅನಾಹುತ ತಪ್ಪಿದೆ.
ಇದನ್ನೂ ಓದಿ: ಮಂಗಳೂರು : ಜನವರಿ 11 ಮತ್ತು 12 ರಂದು ಕದ್ರಿಪಾರ್ಕಿನಲ್ಲಿ ಕಲಾ ಪರ್ಬ…!
ಕಿನ್ನಿಗೋಳಿ ಕಡೆಯಿಂದ ಹಳೆಯಂಗಡಿ ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನ ಇಂದ್ರ ನಗರ ರೈಲ್ವೇ ಗೇಟ್ ತಲುಪುತ್ತಿದ್ದಂತೆ ಗೇಟ್ ಸಿಬ್ಬಂದಿ ರೈಲು ಬರುವ ಹೊತ್ತಿನಲ್ಲಿ ಗೇಟ್ ಹಾಕಲು ಕರ್ತವ್ಯ ನಿರತರಾದಾಗ ಏಕಾಏಕಿ ಪಿಕಪ್ ಚಾಲಕ ತರಾತುರಿಯಿಂದ ಗೇಟ್ ಮೂಲಕ ನುಗ್ಗಿಸಲು ಯತ್ನಿಸಿದಾಗ ಗೇಟ್ ತುಂಡಾಗಿದೆ.
ಕೂಡಲೇ ರೈಲ್ವೇ ಗೇಟ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು ಕೂಡಲೇ ತಾತ್ಕಾಲಿಕ ನೆಲೆಯಲ್ಲಿ ಕಬ್ಬಿಣದ ರಾಡ್ ಗಳನ್ನು ಅಳವಡಿಸಿ ಗೇಟ್ ಬಳಿ ರಕ್ಷಣೆಯ ಕಾರ್ಯಾಚರಣೆ ನಡೆಸಿದ್ದಾರೆ.
ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪಿಕಪ್ ಚಾಲಕನ ವಿರುದ್ಧ ದೂರು ದಾಖಲಾಗಿದೆ.