ಕಡಬ: ಸಾಂಜೋ ಸುನಿಲ್ ಸಾವು ಕೊಲೆ ಶಂಕೆ ಆರೋಪ…!

ಕಡಬ: ಇತ್ತೀಚೆಗೆ ಐರ್ಲೆಂಡಿನಲ್ಲಿ ಸಾವೀಗೀಡಾಗಿರುವ ಕುಟ್ರುಪ್ಪಾಡಿ ನಿವಾಸಿ ಸಾಂಜೋ ಸುನೀಲ್ ಅವರ ಸಾವಿನ ಕುರಿತು ಅನೇಕ ಸಂದೇಹಗಳಿದ್ದು ಇದರ ಸಮಗ್ರ ತನಿಖೆ ನಡೆಸಬೇಕೆಂದು ಅಗ್ರಹಿಸಿ ಕಡಬದ ಕ್ರಿಶ್ಚಿಯನ್ ಲೈಟ್ನಿಂಗ್ ಮತ್ತು ಮಲಯಾಳಿ ಫ್ರೆಂಡ್ಸ್ ನೇತೃತ್ವದಲ್ಲಿ ಕಡಬ ಅನುಗ್ರಹ ಸಭಾಭವನದಿಂದ ಸೈಂಟ್ ಜೋಕಿಮ್ಸ್ ವಾಣಿಜ್ಯ ಕಟ್ಟಡದ ಮುಂಭಾಗದವರೆಗೆ ಮೇಣದ ಬತ್ತಿ ಹೊತ್ತಿಸಿ ಮೌನ ಮೆರವಣಿಗೆ ನಡೆಯಿತು.

ಸಾಂಜೋ ಸುನಿಲ್ ಅವರದ್ದು ಆತ್ಮಹತ್ಯೆ ಅಲ್ಲ, ಇದೊಂದು ವ್ಯವಸ್ಥಿತ ಕೊಲೆ ಪ್ರಕರಣವೆನ್ನುವ ಸಂಶಯ ಮೂಡಿದೆ, ಪ್ರಕರಣ ಕುರಿತು ಸಾರ್ವಜನಿಕ ವಲಯದಲ್ಲಿ ಅನೇಕ ಸಂದೇಹಗಳಿವೆ ಹಾಗಾಗಿ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಬರಬೇಕು ಎಂದರು.


ಸಾಂಜೋ ಸುನೀಲ್ ಮದುವೆಯಾಗಿ ಒಂದೇ ತಿಂಗಳು ಊರಲ್ಲಿ ಇದ್ದು ಬಳಿಕ ಉದ್ಯೋಗ ನಿಮಿತ್ತ ಇಸ್ರೇಲ್‌ಗೆ ಹೋದರೆ, ಇವರ ಪತ್ನಿ ಲಿಷ್ಮಾ ಫಿಲಿಪ್ ಉದ್ಯೋಗ ನಿಮಿತ್ತ ಐರ್ಲೆಂಡ್‌ಗೆ ತೆರಳಿದ್ದರು. ಆರು ತಿಂಗಳ ಬಳಿಕ ಇಸ್ರೆಲ್‌ನ ಉದ್ಯೋಗ ಬಿಟ್ಟು ಪತ್ನಿಯೊಂದಿಗೆ ಐರ್ಲೆಂಡ್‌ನಲ್ಲಿ ವಾಸಿಸುವ ಉದ್ದೇಶದಿಂದ ಅಲ್ಲಿಯೇ ಉದ್ಯೋಗ ಪಡೆಯಲು ಪತ್ನಿಯ ಡಿಪೆಂಡೆಡ್ ವೀಸಾದಲ್ಲಿ ಐರ್ಲೆಂಡ್‌ಗೆ ತೆರಳಿದ್ದರು. ಐರ್ಲೆಂಡ್‌ಗೆ ತಲುಪಿದ 28 ನೇ ದಿನಕ್ಕೆ ಸಾಂಜೋ ಸುನೀಲ್ ಅವರ ಮೃತ ದೇಹವು ಸಂಶಯಾತ್ಮಕ ರೀತಿಯಲ್ಲಿ ಕಂಡುಬಂದಿತ್ತು.

ಸಾಂಜೋ ಸುನೀಲ್ ಪತ್ನಿ ಲಿಷ್ಮಾ ಪ್ರಕಾರ ಅವರು ಹೊರಗಡೆ ಹೋಗಿ ಬರುವಾಗ ಮನೆಯಲ್ಲಿ ಬಾತ್ ರೂಮಲ್ಲಿ ಸಾಂಜೋ ರೇಡಿಯೇಟರ್ ಕೇಬಲ್‌ಗೆ ನೇಣು ಬಿಗಿದುಕೊಂಡು ಮೊಣಕಾಲೂರಿದ ಸ್ಥಿತಿಯಲ್ಲಿ ಇತ್ತು. ಈ ಬಗ್ಗೆ ಆಕೆ ಅಲ್ಲಿನ ಪೋಲೀಸ್ ನವರಿಗೆ ಮಾಹಿತಿ ತಿಳಿಸಿದ್ದಾರೆ. ಪ್ರಥಮ ಚಿಕಿತ್ಸೆಗಾಗಿ ದೇಹವನ್ನು ರೇಡಿಯೇಟರ್‌ನಿಂದ ಬಿಚ್ಚಿ ಕೆಳಗಡೆ ಮಲಗಿಸಿದ್ದರು ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಇವರಿಗೆ ಸಹಕಾರ ನೀಡಿರುವ ಅನ್ಯ ವ್ಯಕ್ತಿಯ ಬಗ್ಗೆ ಸಂಶಯ ವ್ಯಕ್ತವಾಗಿದೆ. ಲಿಷ್ಮಾಳ ಪ್ಲಾಟ್‌ಗೆ ಆ ವ್ಯಕ್ತಿ ಬಂದು ಹೋಗಿರುವ ಸಿಸಿ ಕ್ಯಾಮರದ ದೃಶ್ಯಾವಳಿ ಕೂಡ ಇದೆ. ವಿವಾಹಿತನಾಗಿರುವ ಕೇರಳ ಮೂಲದ ಆ ವ್ಯಕ್ತಿಗೆ ಲಿಷ್ಮಾ ಫಿಲಿಪ್‌ನವಳೊಂದಿಗೂ ಆತ್ಮೀಯತೆ ಇತ್ತು ಎನ್ನುವುದು ಶಂಶಯಕ್ಕೆ ಎಡೆಮಾಡಿದೆ.


ನೇಣು ಬಿಗಿದು ಸಾಯುವಂತಹ ಯಾವುದೇ ಪ್ಯಾನ್ ಅಥವಾ ಅದಕ್ಕೆ ಸಂಬಂಧಿಸಿದ ಇತರ ವ್ಯವಸ್ಥೆಗಳು ಆ ರೂಮಿನಲ್ಲಿ ಇರಲಿಲ್ಲ. ಆತ ನೇಣು ಬಿಗಿದುಕೊಂಡ ಎಂದು ಹೇಳುವ ಬಾತ್ ರೂಮ್‌ನ ರೇಡಿಯೇಟರ್ ಕೇಬಲ್ ಕೇವಲ 5 ಅಡಿ ಮಾತ್ರ ಎತ್ತರದಲ್ಲಿ ಇರುತ್ತದೆ.

ಸರಿಸುಮಾರು 6 ಅಡಿ ಎತ್ತರದ ಸಾಂಜೋ ಸುನೀಲ್ ಇದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಲಿಷ್ಮಾ ಹೇಳಿಕೊಂಡಂತೆ ವಿಶ್ವಾಸಯೋಗ್ಯವಾದ ಕತೆಯಲ್ಲ. ಆದ್ದರಿಂದ ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೂ ಮುತುವರ್ಜಿ ವಹಿಸಿಕೊಂಡು ಸಾಂಜೋ ಸುನೀಲ್‌ರವರ ಸಾವಿನ ಬಗ್ಗೆ ಕೂಲಂಕುಶ ತನಿಖೆ ನಡೆಸಿ, ಅಲ್ಲಿ ನಡೆಸಿರುವ ಸಾಂಜೋ ರವರ ಶವ ಮಹಜರು ಮತ್ತು ತನಿಖಾ ವರದಿಯನ್ನು ತರಿಸಿಕೊಂಡು ಸಾರ್ವಜನಿಕರಲ್ಲಿರುವ ಗೊಂದಲವನ್ನು ನಿವಾರಣೆ ಮಾಡಬೇಕು ಹಾಗೂ ಸತ್ಯಾಂಶ ಹೊರಬರಬೇಕು ಎಂದು ಅಗ್ರಹಿಸಿ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಸೇವಿಯರ್ ಬೇಬಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಡಬದ ಕ್ರಿಶ್ಚಿಯನ್ ಲೈಟ್ನಿಂಗ್ ಮತ್ತು ಮಲಯಾಳಿ ಪ್ರೆಂಡ್ಸ್ನ ಪ್ರಮುಖರಾದ ಮನೋಜ್ , ಶ್ಯಾಂಡೋ ಕೆ.ಡಿ., ಸಜಿ.ಕೆ.ಜಾನ್, ಬಿನೊಯ್ ಮ್ಯಾಥ್ಯೂ ಉಪಸ್ಥಿತರಿದ್ದರು.

Discover more from U Plus TV

Subscribe now to keep reading and get access to the full archive.

Continue reading