ಬೆಳ್ತಂಗಡಿ : ಭಾರತೀಯ ಸೇನೆಯಲ್ಲಿ ದೇಶದ ಗಡಿ ಕಾಯ್ದು, ನಿವೃತ್ತಿಯ ನಂತರವೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಸಾಧಾರಣ ಮಾತಲ್ಲ. ಅಂತಹ ಅಪರೂಪದ ಸಾಧಕರಿಗೆ ಭಾರತೀಯ ಸೇನೆಯು ನೀಡುವ ಅತ್ಯುನ್ನತ ‘ನಿವೃತ್ತ ಸಾಧಕ ಯೋಧ’ (Veterans Best Achiever’s Award) ಪ್ರಶಸ್ತಿ ಈ ಬಾರಿ ನಮ್ಮ ಕರಾವಳಿಯ ಬೆಳ್ತಂಗಡಿಗೆ ಲಭಿಸಿದೆ.

ಭಾರತೀಯ ಸೇನೆಯ ಮಹಾ ದಂಡನಾಯಕರಾದ (Chief of the Army Staff) ಜನರಲ್ ಉಪೇಂದ್ರ ದ್ವಿವೇದಿ ಅವರು ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಬೆಳ್ತಂಗಡಿಯ ನಿವೃತ್ತ ಯೋಧ ಲಯನ್ ಡಾ. ಗೋಪಾಲಕೃಷ್ಣ ಕಾಂಚೋಡು ಅವರು ಆಯ್ಕೆಯಾಗಿದ್ದಾರೆ.
ಮಾರ್ಚ್ 20 ರಂದು ನವದೆಹಲಿಯ ಸೇನಾ ಮುಖ್ಯಾಲಯದಲ್ಲಿ (Army Headquarters) ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ, ಸ್ವತಃ ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿಯವರು ಡಾ. ಗೋಪಾಲಕೃಷ್ಣ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.









