ಉಜಿರೆ: ಟಿ.ಪ್ರಕಾಶ ಪ್ರಭು, ವಿಶ್ರಾಂತ ಗಣಿತ ಪ್ರಾಥ್ಯಾಪಕರು, ಶ್ರೀ ಧ.ಮ.ಪದವಿ ಕಾಲೇಜು ಉಜಿರೆ, ಇವರು ತಮ್ಮ Ph.D ಪದವಿಗಾಗಿ ಮಂಡಿಸಿದ “ಸಮ್ ಸ್ಟಡೀಸ್ ಇನ್ ಪೊಯ್ಂಟ್ ಸೆಟ್ ಟೊಪೊಲಜಿ- ಸಮ್ ಫಂಕ್ಷನ್ಸ ವಯಾ ಆಲ್ಫಾ ಓಪನ್ ಸೆಟ್ಸ” (SOME STUDIES IN POINT SET TOPOLOGY- SOME FUNCTIONS VIA ALPHA OPEN SETS) ಪ್ರಬಂಧಕ್ಕೆ ಗಣಿತ ವಿಭಾಗ,

ದ್ರಾವಿಡಿಯನ್ ವಿಶ್ವ ವಿದ್ಯಾಲಯ, ಕುಪ್ಪಂ, “ಡಾಕ್ಟರೇಟ್” ಪದವಿಯನ್ನು ನೀಡಿದೆ. ಶ್ರೀಯುತರು ಧಾರವಾಡದ ಡಾ ಗೋವಿಂದಪ್ಪ ನವಲಗಿ ಇವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಮಂಡಿಸಿದ್ದರು.


ಶ್ರೀಯುತರು ಶ್ರೀ ಧ.ಮ.ಪದವಿ ಕಾಲೇಜು ಉಜಿರೆಯಲ್ಲಿ 34 ವರ್ಷ ಗಣಿತ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗ ವರಿಷ್ಠರಾಗಿ, ಡೀನ್ ಆಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಬೆಳ್ತಂಗಡಿ ರೋಟರೀ ಕ್ಲಬ್ ನ ಅಧ್ಯಕ್ಷರೂ ಆಗಿರುತ್ತಾರೆ.









