ವಿಟ್ಲ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ದುರ್ಗಾನಗರ ಅಜ್ಜಿನಡ್ಕ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ ತಾಲೂಕು ಇವರ ಸಹಯೋಗದೊಂದಿಗೆ ದಿನಾಂಕ 19-4-2026 ಮತ್ತು 20-4-2026ರಂದು ನಡೆಯುವ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು. ಈ ಶಿಬಿರದಲ್ಲಿ ಮಕ್ಕಳಲ್ಲಿ ಧಾರ್ಮಿಕ ಜಾಗೃತಿ,ಅಂಗೈಯಲ್ಲಿ ಆರೋಗ್ಯ,ಕ್ರೀಡೆ,ಕಾನೂನು ಮಾಹಿತಿ, ಕಲೆ,ಸಾಹಿತ್ಯ ಸದಭಿರುಚಿ,ಭಜನಾ ತರಬೇತಿ ಮುಂತಾದ ವಿಷಯಾಧಾರಿತವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳು ನಡೆಯಲಿವೆ.
ಈ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ನೀಡಿದ ಅನುದಾನವನ್ನು ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ರವರು ಭಜನಾ ಮಂದಿರದ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿಗಳಾದ ಜಯರಾಮ್ ರೈ ಕಲ್ಲಡ್ಕ,ಭಜನಾ ಮಂದಿರದ ಅಧ್ಯಕ್ಷರಾದ ಐತಪ್ಪ ಗೌಡ, ಕೋಶಾಧಿಕಾರಿ ರವಿಚಂದ್ರ,ಭಜನಾ ಮಂದಿರದ ಸದಸ್ಯರಾದ ಕರುಣಾಕರ ಅಜ್ಜಿನಡ್ಕ, ಆನಂದ ನಡುಸಾರು, ಅಕ್ಷತಾ,ಅಜ್ಜಿನಡ್ಕ ಸೇವಾಪ್ರತಿನಿಧಿ ಶ್ರೀಮತಿ ಕಾವ್ಯ ಪಿ, ಕೃತಿಕ್ ಉಪಸ್ಥಿತರಿದ್ದರು.







