ಬೆಳ್ತಂಗಡಿ : ಹುಬ್ಬಳ್ಳಿಯ ಫಿಟ್ನೆಸ್ ಜಿಮ್ನಲ್ಲಿ ನಡೆದಿರುವ ಸಂಘಟಿತ ಲೈಂಗಿಕ ಶೋಷಣೆ ಮತ್ತು ಲವ್ ಜಿಹಾದ್ ಪ್ರಕರಣವು ರಾಜ್ಯದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಸಮೀರ್ ಮುಲ್ಲಾ ಮತ್ತು ಅವನ ಸಹೋದರಿ ತೈಸೀಮ್ ಮುಲ್ಲಾ ಪ್ರಮುಖ ಕಿಂಗ್ಪಿನ್ ಆಗಿದ್ದಾರೆ.
ಮಾಹಿತಿಯ ಪ್ರಕಾರ, ಜಿಮ್ ನಡೆಸುತ್ತಿದ್ದ ಸಮೀರ್ ಮುಲ್ಲಾ ಹಿಂದೂ ಯುವತಿಯರೊಂದಿಗೆ ಸ್ನೇಹ ಬೆಳೆಸಿ, ಅವರಿಗೆ ಪಾನೀಯಗಳಲ್ಲಿ ಮದ್ದು ಬೆರೆಸಿ ಅತ್ಯಾಚಾರ ನಡೆಸಿ, ನಗ್ನ ಫೋಟೋ/ವೀಡಿಯೊಗಳನ್ನು ತೆಗೆದು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಹಾಗೂ ಮತಾಂತರಕ್ಕೆ ಒತ್ತಾಯ ಮಾಡುತ್ತಿದ್ದಾನೆ. ತೈಸೀಮ್ ಮುಲ್ಲಾ ಈ ಕೃತ್ಯಗಳಲ್ಲಿ ಪ್ರಮುಖ ಪಾತ್ರವಹಿಸಿ, ಯುವತಿಯರನ್ನು ಪರಿಚಯಿಸಿ ಹಾಗೂ ಮೋಸದಿಂದ ಪ್ರಭಾವಿಸಿ ಈ ಜಾಲದಲ್ಲಿ ಸಿಲುಕಿಸುತ್ತಿದ್ದಾಳೆ.
ಪೊಲೀಸರ ತನಿಖೆಯಲ್ಲಿ ಸಮೀರ್ ಮುಲ್ಲಾದ ಮೊಬೈಲ್ನಲ್ಲಿ ಹಲವು ಯುವತಿಯರ ಅರೆನಗ್ನ ಚಿತ್ರಗಳು ಪತ್ತೆಯಾಗಿರುವುದು ಹಾಗೂ ಅನೇಕ ಪೀಡಿತರು ಮುಂದೆ ಬರುತ್ತಿರುವುದು ಗಂಭೀರ ಸಂಗತಿಯಾಗಿದೆ. ಅದಲ್ಲದೇ ಮತ್ತೋರ್ವ ಮಹಿಳೆಯು ಸಮೀರ್ ಮುಲ್ಲಾ ತನ್ನ ಖಾಸಗಿ ವಿಡಿಯೋ ಇಟ್ಟುಕೊಂಡು ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾನೆ. ಹಿಂದೂ ಯುವತಿಯರನ್ನು ಎಟಿಮ್ ತರಹ ಉಪಯೋಗ ಮಾಡಿ, ಲಕ್ಷರಿ ಜೀವನ ಮಾಡುತ್ತಿದ್ದಾನೆ ಎಂದು ಹೇಳಿಕೆ ನೀಡಿದ್ದಾಳೆ. ಅದಲ್ಲದೇ ಇದೇ ಜಿಮ್ನಲ್ಲಿ ಮತ್ತೊಬ್ಬ ಯುವಕನು ಸಹ ಇದೇ ರೀತಿಯ ವಿಧಾನವನ್ನು ಅನುಸರಿಸಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವುದು ಈ ಘಟನೆಗಳ ಗಂಭೀರತೆಯನ್ನು ಹೆಚ್ಚಿಸಿದೆ.
ಇಂತಹ ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ಹಿಂದೆಯೂ ವರದಿಯಾಗಿವೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜಿಮ್ ಜಾಲವನ್ನು ಪೊಲೀಸರು ಭೇದಿಸಿ ಅನೇಕ ಪಿಟ್ನೆಸ್ ಕೇಂದ್ರಗಳನ್ನು ಸೀಲ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಇದೇ ರೀತಿಯ ಘಟನೆಗಳು ವರದಿಯಾಗಿವೆ.
ಈ ಹಿನ್ನೆಲೆಯಲ್ಲಿ ಜಿಮ್ಗಳು ಫಿಟ್ನೆಸ್ ಕೇಂದ್ರಗಳ ಹೆಸರಿನಲ್ಲಿ ಮತಾಂತರ ಕೇಂದ್ರ ನಡೆಸುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತವಾಗುತ್ತಿದೆ. ಮಹಿಳೆಯರ ಮೇಲೆ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ, ಬ್ಲ್ಯಾಕ್ಮೇಲ್, ಹಣ ಹಾಗೂ ಆಭರಣ ದೋಚುವುದು ಮತ್ತು ಮೋಸದಿಂದ ಮತಾಂತರ ಮಾಡುವಂತಹ ಪ್ರಕರಣಗಳು ಹೆಚ್ಚುತ್ತಿದೆ.
ಇಂತಹ ಲವ್ ಜಿಹಾದ್ ಹಾಗೂ ಲೈಂಗಿಕ ಶೋಷಣೆ ಕುರಿತು ಸಮಗ್ರ ತನಿಖೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂದೂ ಜನಜಾಗೃತಿ ಸಮಿತಿ ಮತ್ತು ರಣರಾಗಿಣಿ ಸಂಘಟನೆಯಿಂದ ಶ್ರೀ ಪೃಥ್ವಿ ಸಾನಿಕಂ, ತಹಶೀಲ್ದಾರರು ಬೆಳ್ತಂಗಡಿ. ಇವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಸೌ. ಪುಷ್ಪ ವೇಣೂರು,ಸೌ. ಶುಭಾ, ಸೌ. ಜಯಲಕ್ಸ್ಮಿ, ಸೌ. ಯಶೋಧ, ಸೌ. ವಿನಯ, ಸೌ. ರಾಧಿಕಾ,ಶ್ರೀ ಸುನಿಲ್. ಬಿ ಗ್ರಾಮ ಪಂಚಾಯಿತಿ ಸದಸ್ಯರು ಬಜಿರೆ, ಹರೀಶ್ ಶೆಟ್ಟಿ ಗರ್ಡಾಡಿ, ಅಕ್ಷಯ್ ವಕೀಲರು, ಶಿವರಾಮ್ ಉಜಿರೆ, ವಾಮನ್ ಬಾಳಿಗ, ರಾಘವೇಂದ್ರ ಕಾಮತ್, ಯೋಗಿಶ್ ಕೆ,ಹರೀಶ್ ಮುದ್ದಿನಡ್ಕ, ಶಿವ ಪ್ರಸಾದ್ ಮತ್ತಿರರು ಉಪಸ್ಥಿತರಿದ್ದರು.
ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆಗಳು:
೧. ಸಮೀರ್ ಮುಲ್ಲಾ, ತೈಸೀಮ್ ಮುಲ್ಲಾ ಮತ್ತು ಸಂಬಂಧಿತ ಜಿಮ್ ಜಾಲದ ಕುರಿತು ಸಮಗ್ರ ತನಿಖೆ ನಡೆಸಿ, ಎಲ್ಲಾ ಮೊಬೈಲ್/ಡಿಜಿಟಲ್ ಸಾಧನಗಳನ್ನು ಪರಿಶೀಲಿಸಿ, ಇತರ ಪೀಡಿತರ ಹಾಗೂ ಶಾಹಿನ್ ಗ್ಯಾಂಗ್ ಸಂಪರ್ಕಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು.
೨. ಈ ಪ್ರಕರಣಕ್ಕೆ ವಿಶೇಷ ತನಿಕಾ ದಳವನ್ನು ರಚನೆ ಮಾಡಿ, ಕೋಕಾ, ಪೋಕ್ಸೋ ಕಾಯ್ದೆ, ಅತ್ಯಾಚಾರ, ವಸೂಲಿ, ಐಟಿ ಕಾಯ್ದೆ ಮತ್ತು ಕರ್ನಾಟಕದ ಮತಾಂತರ ವಿರೋಧಿ ಕಾಯ್ದೆಗಳಡಿ ದೂರು ದಾಖಲಿಸಿ, ಆರೋಪಿಗಳನ್ನು ಕಸ್ಟಡಿಗೆ ಪಡೆದು ಫಾಸ್ಟ್ ಟ್ರ್ಯಾಕ್ ಕೋರ್ಟಲ್ಲಿ ವಿಚಾರಣೆ ನಡೆಸಬೇಕು.
೩. ಸಂಬಂಧಿತ ಜಿಮ್ ಅನ್ನು ಸೀಲ್ ಮಾಡಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಎಲ್ಲಾ ಜಿಮ್ಗಳಲ್ಲಿ ಟ್ರೈನರ್ಗಳ ಪರಿಶೀಲನೆ, ಸಿಸಿಟಿವಿ ವ್ಯವಸ್ಥೆ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆಗಳಿರುವುದನ್ನು ಖಚಿತಪಡಿಸಬೇಕು.
೪. ಎಲ್ಲಾ ಜಿಮ್ ಸಿಬ್ಬಂದಿಗೆ ಪೊಲೀಸ್ ವೆರಿಫಿಕೇಶನ್ ಕಡ್ಡಾಯಗೊಳಿಸಿ, ಮಹಿಳಾ ವಿಭಾಗಗಳಿಗೆ ಮಹಿಳಾ ತರಬೇತುದಾರರನ್ನು ನೇಮಕ ಮಾಡಬೇಕು ಹಾಗೂ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸಬೇಕು.
೫. ರಾಜ್ಯ ಮಹಿಳಾ ಆಯೋಗವು ಕೂಡಲೇ ಮದ್ಯಪ್ರವೇಶ ಮಾಡಿ, ಪ್ರಕರಣದ ತನಿಖೆ ಮಾಡಬೇಕು.
೬. ಉತ್ತರ ಪ್ರದೇಶದಲ್ಲಿ ಕೈಗೊಂಡಿರುವಂತೆ (ಜಿರೋ ಟಾಲರೆನ್ಸ್) ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು.
೭. ಪೀಡಿತ ಮಹಿಳೆಯ ಗೌಪ್ಯತೆ ಕಾಪಾಡಿ, ಆಕೆಗೆ ಸರಕ್ಷತೆಯನ್ನು ನೀಡಬೇಕು. ಆಕೆಗೆ ಸಂಬಂದಿಸಿದ ವಿಡಿಯೋ ಎಲ್ಲಿಯೂ ಬಿಡುಗಡೆ ಆಗದಂತೆ ನೋಡಿಕೊಳ್ಳಬೇಕು.







