Marodi: ಅಧ್ಯಾತ್ಮ ಮತ್ತು ಸಂಸ್ಕೃತಿಯ ಸಂಗಮಕ್ಷೇತ್ರವಾಗಿರುವ ಶ್ರೀ ಪೊಸರಡ್ಕ ಕ್ಷೇತ್ರದ ಮುಂಬರುವ ಭವ್ಯ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಪ್ರಚಾರ ಕಾರ್ಯಕ್ಕೆ ಈಗ ಹೊಸತೊಂದು ಕಳೆ ಬಂದಿದೆ.
ಕ್ಷೇತ್ರದ ಈ ಐತಿಹಾಸಿಕ ಕ್ಷಣವನ್ನು ಭಕ್ತಾದಿಗಳಿಗೆ ಮನಮುಟ್ಟುವಂತೆ ತಲುಪಿಸಲು, ವಿಶೇಷವಾಗಿ ವಿನ್ಯಾಸಗೊಳಿಸಲಾದ ಬ್ರಹ್ಮಕುಂಭಾಭಿಷೇಕದ ಲಾಂಛನವನ್ನೊಳಗೊಂಡ ‘ಪ್ಲೈವುಡ್ ಫ್ಲೆಕ್ಸ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ಸಾಮಾನ್ಯ ಫ್ಲೆಕ್ಸ್ ಬ್ಯಾನರ್ಗಳಿಗಿಂತ ಭಿನ್ನವಾಗಿ, ಪರಿಸರ ಸ್ನೇಹಿ ಹಾಗೂ ಸುದೀರ್ಘ ಕಾಲ ಬಾಳಿಕೆ ಬರುವ ದೃಷ್ಟಿಯಿಂದ ಈ ಪ್ಲೈವುಡ್ ಫ್ಲೆಕ್ಸ್ಗಳನ್ನು ಸಿದ್ಧಪಡಿಸಲಾಗಿದೆ. ಇದು ಕೇವಲ ಪ್ರಚಾರದ ಸಾಧನವಷ್ಟೇ ಅಲ್ಲದೆ, ಕಲಾತ್ಮಕವಾಗಿಯೂ ಭಕ್ತರ ಗಮನ ಸೆಳೆಯುತ್ತಿದೆ.







