ಕಾಸರಗೋಡು: ಕಾಸರಗೋಡು ಜಿಲ್ಲೆಯ ಚೆಂಗಳ ಪಂಚಾಯತಿನ ಒಂದನೇ ವಾರ್ಡಿನ ಮೀನಾಡಿ ಪಲ್ಲ ಯಮುನಾ ಎಂಬವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್

ಕಾಸರಗೋಡು ತಾಲೂಕಿನ ವಾತ್ಸಲ್ಯ ಸದಸ್ಯರಾದ ಯಮುನಾ ರವರಿಗೆ ಕ್ಷೇತ್ರದಿಂದ ಮಂಜೂರಾದ ವಾತ್ಸಲ್ಯ ಮನೆಯ ಹಸ್ತಾಂತರ ಕಾರ್ಯಕ್ರಮವನ್ನು ಕಾಸರಗೋಡು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಅಖಿಲೇಶ್ ನಗಮಗಂ ಅವರ ಅಧ್ಯಕ್ಷತೆಯಲ್ಲಿ ಚೆoಗಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಸಂತ ಅಜಕ್ಕೋಡು ನಾಮಫಲಕ ಅನಾವರಣ ಮಾಡಿದರು.


ದಕ್ಷಿಣ ಕನ್ನಡ -2 ಜಿಲ್ಲೆಯ ಮಾನ್ಯ ನಿರ್ದೇಶಕರಾದ ಬಾಬು ನಾಯ್ಕ ಸರ್ ಫಲ ಪುಷ್ಪದೊಂದಿಗೆ ಮನೆಯ ಕೀ ನೀಡಿ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು.

ಜನಜಾಗೃತಿ ಸದಸ್ಯರಾದ ನವೀನ್ ಭಟ್, ಲಕ್ಷ್ಮೀ ಶೆಟ್ಟಿ ಮಾನ್ಯ, ಬದಿಯಡ್ಕ ಪಂಚಾಯತ್ ಸದಸ್ಯರಾದ ಶ್ಯಾಮ್ ಪ್ರಸಾದ್, ತಾಲೂಕಿನ ಯೋಜನಾಧಿಕಾರಿಗಳಾದ ದಿನೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯ ಗಿರೀಶ್, ಮಾನ್ಯ ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ ಹೇಮಲತಾ ಎಡನೀರು ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ ರಾಜೀವಿ ಮಾನ್ಯ ಒಕ್ಕೂಟದ ಅಧ್ಯಕ್ಷರಾದ ಸುನಿಲ್ ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು.








