ಗೇರುಕಟ್ಟೆ: ಗೇರುಕಟ್ಟೆ ಕಳಿಯ ಗ್ರಾಮದ ನೆಲ್ಲಿಕಟ್ಟೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿಯ ಮಹಾಸಭೆಯು ನಡೆದು, ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಭಜನಾ ಮಂಡಳಿಯ ಅಧ್ಯಕ್ಷರಾದ ಸತೀಶ್ ಗೌಡ ಕುಳಾಯಿ ಇವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.
ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಜನಾರ್ದನ ಗೌಡ ಶುಭೋದಯ ಕುಳಾಯಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುಂದರ ನಾಯ್ಕ್ ತುಳಸಿ ನಿವಾಸ ಕುಳಾಯಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ನಂದೀಶ್ ಶೆಟ್ಟಿ ನೆಲ್ಲಿಕಟ್ಟೆ,
ಕಾರ್ಯದರ್ಶಿಯಾಗಿ ಕೇಶವ ಪೂಜಾರಿ ನೆಲ್ಲಿಕಟ್ಟೆ ಹಾಗೂ ಕೋಶಾಧಿಕಾರಿಯಾಗಿ ರವೀಂದ್ರ ಪೂಜಾರಿ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಪ್ರಧಾನ ಅರ್ಚಕ ದರ್ಣಪ್ಪ ಪೂಜಾರಿ, ಕಳಿಯ ಗ್ರಾ. ಪಂ. ಮಾಜಿ ಅಧ್ಯಕ್ಷ ದಿವಾಕರ ಪೂಜಾರಿ ಮೆದಿನ, ಅಶೋಕ್ ಆಚಾರ್ಯ, ಶಿವರಾಮ್ ಗೌಡ ದಾಸರಬೆಟ್ಟು, ಹಿರಿಯರಾದ ದಾಮೋದರ್ ಶೆಟ್ಟಿ ಹರ್ಮಾಡಿ, ಸುಂದರ ಗೌಡ ಉಬರಡ್ಕ, ಶೇಖರ ಪೂಜಾರಿ ಹಾಗೂ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.








