ಬೆಳ್ತಂಗಡಿ: ತಾಲೂಕಿನ ನಿಡ್ಲೆ ಗ್ರಾಮದ ನಿವಾಸಿಯೊಬ್ಬರು ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದ ಘಟನೆ ಸುಖಾಂತ್ಯ ಕಂಡಿದೆ. ನಾಪತ್ತೆಯಾಗಿದ್ದ ದಿನೇಶ್ ಎಂಬುವವರು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದಾರೆ.
ನಿಡ್ಲೆ ಗ್ರಾಮದ ಕಾಟ್ಲ ಮನೆ ನಿವಾಸಿ ದಿನೇಶ್ ಎಂಬುವವರು ಮೇ 4ರಂದು ಔಷಧ ತರುವ ಸಲುವಾಗಿ ತಮ್ಮ ತಾಯಿಯವರೊಂದಿಗೆ ಬೆಳ್ತಂಗಡಿಗೆ ಬಂದಿದ್ದರು. ಬೆಳ್ತಂಗಡಿಗೆ ಬಂದ ಬಳಿಕ ಅವರು ದಿಢೀರ್ ನಾಪತ್ತೆಯಾಗಿದ್ದರು. ಮಗ ಕಾಣೆಯಾದ ಬಗ್ಗೆ ಕಂಗಾಲಾದ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದರು.
ದಿನೇಶ್ ಅವರಿಗಾಗಿ ಕುಟುಂಬದವರು ತೀವ್ರ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ, ಬೆಳ್ತಂಗಡಿ ಖಾಸಗಿ ಕ್ಲಿನಿಕ್ ವೈದ್ಯರು ನಿನ್ನೆ ಸಂಜೆ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ದಿನೇಶ್ ಅವರು ಕ್ಲಿನಿಕ್ ನಲ್ಲಿರುವ ಮಾಹಿತಿಯನ್ನು ವೈದ್ಯರು ನೀಡಿದ್ದು, ಇದರಿಂದ ಕುಟುಂಬಸ್ಥರು ಸಮಾಧಾನಗೊಂಡಿದ್ದಾರೆ.







