ಬೆಳಾಲು: ಮೇ.5 ರಂದು ಬೆಳಾಲು ಪೇಟೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ಸ್ಕೂಟರ್ ಸವಾರನ ಪ್ರಾಣವನ್ನು ಬಲಿಪಡೆದಿದೆ. ಕ್ರೇನ್ ಮತ್ತು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಈ ಡಿಕ್ಕಿಯಲ್ಲಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟ ವ್ಯಕ್ತಿ ರಬ್ಬರ್ ಟ್ಯಾಂಪಿಂಗ್ ವೃತ್ತಿ ನಡೆಸುತ್ತಿದ್ದರು. ಹತ್ತಿರ ಅಂಗಡಿಗೆ ಬಂದಿದ್ದ ಅವರು ಸ್ಕೂಟರ್ ನಲ್ಲಿ ಸಂಚಾರಿಸುತ್ತಿದ್ದ ವೇಳೆ ಕ್ರೇನ್ ಹಿಂಬಾಗದಿಂದ ಡಿಕ್ಕಿ ಹೊಡೆದು ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ಎನ್ನಲಾಗುತ್ತಿದೆ.






