ಧರ್ಮಸ್ಥಳ: ಧರ್ಮಸ್ಥಳದ ಎಸ್ಡಿಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ರೋಗಿಗಳ ಸೇವೆಗೆ ಪೂರಕವಾಗಿ ಎರಡು ಪ್ರಮುಖ ಅತ್ಯಾಧುನಿಕ ಸೌಲಭ್ಯಗಳು ಸೇರ್ಪಡೆಗೊಂಡಿವೆ. ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಸಂಚಾರಕ್ಕಾಗಿ ಬ್ಯಾಂಕ್ ಆಫ್ ಬರೋಡಾ ಉಜಿರೆ ಶಾಖೆ 4.65 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ಬಗ್ಗಿ (Electric Buggy) ಯನ್ನು ದೇಣಿಗೆಯಾಗಿ ನೀಡಿದೆ.
ತಮಿಳುನಾಡಿನ ಸೇಲಂ ನಿವಾಸಿಗಳಾದ ಎಂ. ಬಾಲಸುಬ್ರಮಣ್ಯಂ ಮತ್ತು ಬಿ. ಸುಬ್ಬುಲಕ್ಷ್ಮಿ ದಂಪತಿಯು ಶ್ವಾಸಕೋಶದ ಚಿಕಿತ್ಸೆಗೆ ಸಹಕಾರಿಯಾಗುವ 5.85 ಲಕ್ಷ ಬೆಲೆಬಾಳುವ ಬ್ರಾಂಕೋಸ್ಕೋಪ್ (Bronchoscope) ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮೂಲಕ ಈ ಎರಡೂ ಕೊಡುಗೆಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
ಧರ್ಮಸ್ಥಳ: ಉಜಿರೆಯಲ್ಲಿರುವ ಎಸ್.ಡಿ.ಎಂ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆಗೆ ಬ್ಯಾಂಕ್ ಆಫ್ ಬರೋಡಾ ಉಜಿರೆ ಶಾಖೆ ವತಿಯಿಂದ 4.65 ಲಕ್ಷ ಬೆಲೆಬಾಳುವ ಎಲೆಕ್ಟ್ರಿಕ್ ಬಗ್ಗಿ ಹಾಗೂ ಎಂ. ಬಾಲಸುಬ್ರಮಣ್ಯಂ ಮತ್ತು ಬಿ. ಸುಬ್ಬುಲಕ್ಷ್ಮಿ ಸೇಲಂ, ತಮಿಳುನಾಡು ಇವರು 5.85 ಲಕ್ಷ ಬೆಲೆಬಾಳುವ ಬ್ರಾಂಕೋಸ್ಕೋಪ್ ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪೂಜ್ಯ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ, ಎಸ್ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್, ಬ್ಯಾಂಕ್ನ ಅಧಿಕಾರಿಗಳು ಹಾಗೂ ಆಸ್ಪತ್ರೆಯ ವೈದ್ಯಕೀಯ ಮತ್ತು ಆಡಳಿತ ಮಂಡಳಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.







