ತಿಪಟೂರು: ತೆಂಗು ಬೆಳೆಗಾರರು ಅಡಕೆ ಕೃಷಿಯತ್ತ ಒಲವು ತೋರುತ್ತಿರುವುದು, ಇಳುವರಿ ಕುಸಿತ, ಉತ್ತರ ಭಾರತದಿಂದ ಹೆಚ್ಚಿದ ಬೇಡಿಕೆ ಪರಿಣಾಮವಾಗಿ ತಿಪಟೂರು ಕೊಬ್ಬರಿ ಧಾರಣೆಯಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ಕಳೆದ ಕೆಲವು ತಿಂಗಳಿಂದ 28 ಸಾವಿರ ರೂ.ನಿಂದ 31 ಸಾವಿರ ರೂ.ವರೆಗೆ ತೂಗುಯ್ಯಾಲೆಯಾಡುತ್ತಿದ್ದ ಬೆಲೆ ಕ್ವಿಂಟಾಲ್ಗೆ 32, 218 ರೂ. ತಲುಪಿದೆ.

2025ರ ಜೂನ್ನಲ್ಲಿ ದಾಖಲಾಗಿದ್ದ 31,606 ರೂ. ಗರಿಷ್ಠ ದಾಖಲೆಯನ್ನು ಸೋಮವಾರದ ಹರಾಜು ಬ್ರೇಕ್ ಮಾಡಿದೆ. ತಿಪಟೂರು ಎಪಿಎಂಸಿ ಮಾರುಕಟ್ಟೆಗೆ 3,771 ಚೀಲ (1621 ಕ್ವಿಂಟಾಲ್) ಕೊಬ್ಬರಿ ಆವಕವಾಗಿತ್ತು.

ವರ್ಷದಿಂದ ಶುಕ್ರದೆಸೆ :
2025ರಿಂದ ಕೊಬ್ಬರಿಗೆ ಶುಕ್ರದೆಸೆ ಶುರುವಾಗಿದೆ. 2025ರ ಏಪ್ರಿಲ್ನಲ್ಲಿ ಕ್ವಿಂಟಾಲ್ಗೆ 20 ಸಾವಿರ ರೂ.ತಲುಪಿ ಇತಿಹಾಸ ಸೃಷ್ಟಿಯಾಗಿತ್ತು. ಜೂನ್ 30ರ ವೇಳೆಗೆ 31,606 ರೂ.ತಲುಪಿ ಗರಿಷ್ಠ ಧಾರಣೆ ದಾಖಲೆ ಆಗಿತ್ತು. ಆ ನಂತರ ಸರಾಸರಿ 28-30 ಸಾವಿರ ರೂ.ನಡುವೆ ಧಾರಣೆ ಏರಿಳಿತ ಇತ್ತು. ಆ ಎಲ್ಲಾ ಧಾರಣೆ ದಾಖಲೆ ಸೋಮವಾರದ ಹರಾಜಿನಲ್ಲಿ ಮುರಿದಿದೆ.

ಧಾರಣೆ ಏರಿಕೆಗೆ ಕಾರಣಗಳು:
1.ಇಳುವರಿ ಕುಸಿತ: ರೋಗಬಾಧೆ ಹೆಚ್ಚಾಗಿದ್ದು, ಶೇ.50ರಷ್ಟು ಉತ್ಪಾದನೆ ಕುಸಿತವಾಗಿದೆ. ಇದರಿಂದ ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿ ಪ್ರಮಾಣ ಕಡಿಮೆಯಾಗಿ ಬೇಡಿಕೆ-ಪೂರೈಕೆ ಅಂತರ ಹೆಚ್ಚಾಗಿದೆ.
2.ಅಡಕೆಗೆ ಒತ್ತು : ತೆಂಗು ಬದಲು ರೈತರು ಹೆಚ್ಚಾಗಿ ಅಡಕೆಯತ್ತ ಚಿತ್ತ ನೆಟ್ಟಿದ್ದಾರೆ. ಇದರಿಂದ ಕೊಬ್ಬರಿ ಉತ್ಪಾದನೆ ಕುಂಠಿತಗೊಂಡಿದೆ.

4.ಎಪಿಎಂಸಿ ನಿಯಮ: ಎಪಿಎಂಸಿ ನಿಯಮ ಬದಲಾವಣೆಯಿಂದ ಸೆಕೆಂಡ್ಸ್ ಕೊಬ್ಬರಿಗೆ ಕಡಿವಾಣ ಹಾಕಲಾಗಿದೆ. ಹೀಗಾಗಿ ಎಪಿಎಂಸಿಗೆ ನೇರವಾಗಿ ಎಲ್ಲಾಕೊಬ್ಬರಿ ಬರುವುದರಿಂದ ನಿಯಂತ್ರಣಕ್ಕೆ ಸಿಕ್ಕಿದೆ.
- ಹೆಚ್ಚಿದ ಬೇಡಿಕೆ: ತಿಪಟೂರು ಕೊಬ್ಬರಿಗೆ ದೇಶಿಯ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಬೇಡಿಕೆಯಿದೆ. ಕಳೆದ ತಿಂಗಳುಗಳಲ್ಲಿ ದಕ್ಷಿಣ ಭಾರತಕ್ಕೆ ಹೆಚ್ಚು ಸರಬರಾಜು ಆಗುತ್ತಿದ್ದ ಕೊಬ್ಬರಿ, ಈಗ ಉತ್ತರ ಭಾರತ ಮಾರುಕಟ್ಟೆಗೆ ಸಾಗುತ್ತಿದೆ.





