ದೇಂತಡ್ಕ: ವರಮಹಾಲಕ್ಷ್ಮಿ ಪೂಜಾ ಸಮಿತಿ ದೇಂತಡ್ಕ ಕ್ಷೇತ್ರದಲ್ಲಿ ಸಭೆ ಕರೆಯಲಾಗಿತ್ತು. ಮುಂದಿನ ತಿಂಗಳು 28 /8/2026 ರಂದು ನಡೆಯುವ ವರಮಹಾಲಕ್ಷ್ಮಿ ಪೂಜೆಯ ಸಮಿತಿ ರಚನೆ ನಡೆಸಲಾಯಿತು.


ಸಮಿತಿಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ. ಹರಿಣಾಕ್ಷಿ ಮುರುವ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ತಾರಾ ವಿಶ್ವನಾಥ್ ಗೌಡ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಹಾಗೆ ಸುಮಾರು 50 ಜನ ಸದಸ್ಯರನ್ನು ಸೇರಿಸಿಕೊಳ್ಳಲಾಯಿತು.



ಕ್ಷೇತ್ರದ ಆಡಳಿತ ಸಮಿತಿ ಸದಸ್ಯರಾದ ಶಾಮನಾರಾಯಣ್ ಜೆ ಮತ್ತು ಗಿರೀಶ್ ಶಂಕರ್ ಕೈಲಾರ್ ಹಾಗೂ ಅನಂತ ಕೃಷ್ಣ ಮುರುಗಾಜೆ ಇವರ ಹಿರಿತನದಲ್ಲಿ ಸಮಿತಿ ರಚಿಸಲಾಯಿತು.






