ಕಡೂರು: ಷ| ಬ್ರ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ದೀಪಬೆಳಗಿಸಿ ಆಶೀರ್ವಚನ ನೀಡಿ ಭಜನೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಸಿದರು.

ಕಸಬಾ ವಲಯದ 23 ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಿತು.ವೇದಿಕೆಯಲ್ಲಿ ಭಜನೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಕೆ ಜಿ ಮಂಜುನಾಥ್, ಶ್ರೀಮತಿ ಅಶಾ ತಮ್ಮಯ್ಯ ಗೌರವಾದ್ಯಕ್ಷರು ಭಜನೋತ್ಸವ ಸಮಿತಿ ,ಶ್ರೀ ಗಂಗಾಧರ್ ನಾಯ್ಕ್ ಅಧ್ಯಕ್ಷರು ಭಜನಾ ಪರಿಷತ್, ಶ್ರೀ ಭಂಡಾರಿ ಶ್ರೀನಿವಾಸ್ ಮಾಜಿ ಪುರಸಭಾ ಅಧ್ಯಕ್ಷರು ಕಡೂರು, ,ಶ್ರೀ ರವಿಶಂಕರ್ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಕಡೂರು,ಶ್ರೀಮತಿ ಎ.ಜಿ ನಾಗವೇಣಿ ಕಡೂರು ತಾಲೂಕು ಯೋಜನಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಮೈತ್ರೀಯಿ ಮಂಜುನಾಥ್ ಪ್ರಾರ್ಥನೆ ಹಾಡಿದರು. ಸಂಚಾಲಕರಾದ ಎ.ಜಿ ನಾಗವೇಣಿ ಯವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಶ್ರೀಮತಿ ಪವಿತ್ರ ಬಿ ಎ ಧನ್ಯವಾದವಿತ್ತರು.ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ರವರು ಕಾರ್ಯಕ್ರಮ ನಿರೂಪಿಸಿದರು.







