ಪುತ್ತೂರು: ಇಲ್ಲಿನ ಕಲಿಮಾರ್ ನಿವಾಸಿ, ಪ್ರಸಿದ್ಧ ಜಿಮ್ ಟ್ರೈನರ್ ಸಚಿನ್ ರೈ ಅವರು ಇಂದು ಮುಂಜಾನೆ ಆಕಸ್ಮಿಕವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೂಲತಃ ಮಡಂತ್ಯಾರ್ ನಿವಾಸಿಯಾಗಿದ್ದ ಸಚಿನ್ ರೈ ಅವರು ಕಳೆದ ಹಲವು ವರ್ಷಗಳಿಂದ ಪುತ್ತೂರಿನ ಕಲಿಮಾರ್ನಲ್ಲಿ ವಾಸವಿದ್ದರು. ಕರಾವಳಿ ಭಾಗದಲ್ಲಿ ಉತ್ತಮ ಜಿಮ್ ಟ್ರೈನರ್ ಆಗಿ ಅವರು ಗುರುತಿಸಿಕೊಂಡಿದ್ದರು.
ಮುಂಜಾನೆ ನಡೆದಿದ್ದೇನು?
ಇಂದು ಮುಂಜಾನೆ ಅವರು ತಮ್ಮ ನಿವಾಸದಲ್ಲಿ ದಿಢೀರನೆ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.







