ಬೆಳ್ತಂಗಡಿ: ಯೇಸು ಕ್ರಿಸ್ತರ ಪ್ರೀತಿ ತ್ಯಾಗದ ಸ್ಮರಣೆಯಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರಧಾನ ದೇವಾಲಯವಾದ ಸಂತ ಲಾರೆನ್ಸರ ಕ್ಯಾಥೆಡ್ರಲ್ ಶುಭ ಶುಕ್ರವಾರವನ್ನು ಆಚರಿಸಲಾಯಿತು.

ಅತಿವಂದನೀಯ ಬಿಷಪ್ ಜೇಮ್ಸ್ ಪಟ್ಟೇರಿಲ್ ರವರು ಯೇಸು ಕ್ರಿಸ್ತರು ನಮಗೆ ಕಲಿಸಿದ ಪ್ರೀತಿ, ತ್ಯಾಗ, ಕ್ಷಮೆಯ ಪಾಠಗಳು ಇನ್ನಷ್ಟು ಗಾಢವಾಗಿ ಧ್ಯಾನಿಸಿ ಜೀವನದಲ್ಲಿ ಅಳವಡಿಸಲು ಕರೆ ನೀಡಿದರು.
ಶುಭ ಶುಕ್ರವಾರದ ಆಚರಣೆಗಳಲ್ಲಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಆದ ವಂದನೀಯ ಫಾ. ಮಾಣಿ, ವಂದನೀಯ ಫಾ.ಕುರಿಯಾಕೋಸ್ ,

ವಂದನೀಯ ಫಾ.ಲಾರೆನ್ಸ್ , ಧರ್ಮಭಗಿನಿಯರು ಹಾಗೂ ದೊಡ್ಡ ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಭಾಗವಹಿಸಿದರು.







