ಉಡುಪಿ: ನ್ಯಾಯಾಂಗ ವ್ಯವಸ್ಥೆಯಲ್ಲಿನ ಮಹತ್ವದ ಸುಧಾರಣೆಗಳಿಗಾಗಿ ಭಾರತದ ಸರ್ವೋಚ್ಚ ನ್ಯಾಯಾಲಯವು ಈಗ ಮಹತ್ವದ ಹೆಜ್ಜೆಯನ್ನಿಟ್ಟಿದೆ.

“ಅಖಿಲ ಭಾರತ ಸ್ಟಾಕ್ ವಿಟ್ನೆಸ್ ರಿಫಾರ್ಮ್ಸ್ ಎಕ್ಸ್ಪರ್ಟ್ ಸಮಿತಿ”ಗೆ (All India Stock Witness Reforms Expert Committee) ಸದಸ್ಯರನ್ನು ನೇಮಕ ಮಾಡಲಾಗಿದ್ದು, ಇದರಲ್ಲಿ ನಮ್ಮ ಹೆಮ್ಮೆಯ ಕನ್ನಡಿಗರು ಸ್ಥಾನ ಪಡೆದಿದ್ದಾರೆ.

ಉಡುಪಿ ಮೂಲದ ಖ್ಯಾತ ವಕೀಲರಾದ ಶ್ರೀ ಎಸ್. ರಾಜಶೇಖರ್ ಹಿಲ್ಯಾರ್ ಅವರನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಈ ತಜ್ಞರ ಸಮಿತಿಗೆ ನೇರವಾಗಿ ನೇಮಕ ಮಾಡಿದೆ.
ನ್ಯಾಯಾಲಯಗಳಲ್ಲಿ ಸಾಕ್ಷಿಗಳ ರಕ್ಷಣೆ, ಸಾಕ್ಷ್ಯ ನುಡಿಯುವ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ ಮತ್ತು ‘ಸ್ಟಾಕ್ ವಿಟ್ನೆಸ್’ (ನಿರಂತರವಾಗಿ ಸಾಕ್ಷಿ ನೀಡುವವರು) ಪದ್ಧತಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ.


ರಾಷ್ಟ್ರ ಮಟ್ಟದ ಈ ಉನ್ನತ ಸಮಿತಿಗೆ ಕರ್ನಾಟಕದ ವಕೀಲರೊಬ್ಬರು ಆಯ್ಕೆಯಾಗಿರುವುದು ರಾಜ್ಯದ ಕಾನೂನು ಕ್ಷೇತ್ರಕ್ಕೆ ಸಂದ ಗೌರವವಾಗಿದೆ.





