ಕಲ್ಮಂಜ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಲ್ಮಂಜ ಘಟಕ ಪುನರ್ ರಚನೆ ದಿನಾಂಕ 23.07.2026 ರಂದು ವಿಶ್ವ ಹಿಂದೂ ಪರಿಷತ್ತಿನ ಹಿರಿಯರು ನಮ್ಮೆಲ್ಲರ ಮಾರ್ಗದರ್ಶಕರು ಶ್ರೀ ಮೋಹನ್ ರಾವ್ ಕಲ್ಮಂಜ ರವರ ಮನೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಪುತ್ತೂರು ಬಜರಂಗದಳ ಜಿಲ್ಲಾ ಸಹ ಸಯೋಜಕ ದಿನೇಶ್ ಚಾರ್ಮಾಡಿ ಮಾತನಾಡಿ ಸಂಘಟನೆಯ ಉದ್ದೇಶಗಳ ಬಗ್ಗೆ ತಿಳಿಸಿದರು. ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷರಾದ ಶ್ರೀ ವಿಷ್ಣು ಮಾರಾಠೆಯವರ ಸಮ್ಮುಖದಲ್ಲಿ ಕಲ್ಮಂಜ ಘಟಕದ ಜವಾಬ್ದಾರಿಯನ್ನು ಆಯ್ಕೆ ಮಾಡಲಾಯಿತು.
ವಿಶ್ವ ಹಿಂದೂ ಪರಿಷದ್ ಕಲ್ಮಂಜ ಘಟಕದ ಅದ್ಯಕ್ಷರಾಗಿ ಸಾಂತಪ್ಪ ಮದಿಮಲ್ಕಟ್ಟೆ, ಉಪಾಧ್ಯಕ್ಷರಾಗಿ ದಿನೇಶ್ ಗೌಡ ಬನದಬೈಲು, ಕಾರ್ಯದರ್ಶಿ ಸಂದೀಪ್ ಪರಾರಿಮಜಲು, ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಮುಂಚಾಣ, ಬಜರಂಗದಳ ಸಂಚಾಲಕರಾಗಿ ಜಗದೀಶ್,

ಸಹ ಸಂಯೋಜಕರಾಗಿ ಧನಂಜಯ ಮದ್ಮಲ್ಕಟ್ಟೆ, ವಿಶ್ವ ಹಿಂದೂ ಪರಿಷದ್ ಗೋರಕ್ಷಾ ಪ್ರಮುಖ್ ಜಯಾನಂದ ಕಲ್ಮಂಜ, ಬಜರಂಗದಳ ಗೋರಕ್ಷಾ ಪ್ರಮುಖ್ ಮುರಳೀಧರ ಗೌಡ, ಸುರಕ್ಷಾ ಪ್ರಮುಖ್ ಪುರಕ್ಷಿತ್, ವಿದ್ಯಾರ್ಥಿ ಪ್ರಮುಖ್ ಭರತೇಶ್ ಮದ್ಮಲ್ಕಟ್ಟೆ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ನ ಹಿರಿಯರು ನಮ್ಮೆಲ್ಲರ ಮಾರ್ಗದರ್ಶಕರು ಶ್ರೀ ಮೋಹನ್ ರಾವ್ ಕಲ್ಮಂಜ, ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷರು ಶ್ರೀ ವಿಷ್ಣು ಮರಾಠೆ, ಬಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ ದಿನೇಶ್ ಚಾರ್ಮಾಡಿ,

ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದ ಪ್ರಚಾರ ಪ್ರಸಾರ ಪ್ರಮುಖ್ ನಾಗೇಶ್ ಕಲ್ಮಂಜ, ಬಜರಂಗದಳ ಬೆಳ್ತಂಗಡಿ ಪ್ರಖಂಡ ಬಲೋಪಸನಾ ಪ್ರಮುಖ್ ಮುನೀಷ್ ಉಜಿರೆ, ಹಿರಿಯರಾದ ಶ್ರೀನಿವಾಸ ರಾವ್ ಕಲ್ಮಂಜ, ಪ್ರವೀಣ್ ಕರಿಯನೆಲ, ಕೃಷ್ಣಮೂರ್ತಿ ಹೆಬ್ಬಾರ್,ಅನಿಲ್ ಮದ್ಮಲ್ಕಟ್ಟೆ, ಮೋಹನ್ ಕುಮಾರ್ ಹಾಗೂ ವಿ.ಹಿಂ.ಪ ಬಜರಂಗದಳ ಕಲ್ಮಂಜ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.






