ಉಜಿರೆ: NABH ಪುರಸ್ಕೃ ತ ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ದಿನಾಂ ಕ 19.04.2026 ನೇ ಆದಿತ್ಯವಾರ ಆಸ್ಪತ್ರೆಯ ಔಷಧಾಲಯವನ್ನು ನೂತನವಾ ಗಿ ಸಜ್ಜುಗೊಂಡ ಮತ್ತು ವಿಶಾಲ ಸ್ಥಳಕ್ಕೆ ಸ್ಥಳಾಂತರಿಸಲಾಯಿತು .
ಸ್ಥಳಾಂತರಗೊಂಡ ಔಷಧಾಲಯ (ಫಾರ್ಮಸಿ)ಯನ್ನು ಹಿರಿಯರಾ ದ ಶ್ರೀ ಸೀತಾರಾಮ.ಭಟ್.ಕೆ ಇವರು ಜ್ಯೋ ತಿ ಬೆಳಗಿಸುವ ಮೂಲಕ ಉದ್ಘಾ ಟಿಸಿದರು.
ಈ ಸಂದರ್ಭ ದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾ ದ ಡಾ . ಗೋಪಾಲಕೃಷ್ಣ . ಕೆ ಇವರು ಮಾತನಾಡುತ್ತ, ನಮ್ಮ ಆಸ್ಪತ್ರೆಯ ಔಷಧಾಲಯವನ್ನು ವಿನೂತನವಾ ಗಿ ನಿರ್ಮಿಸಿದ ಮತ್ತು ವಿಶಾಲ ಸ್ಥಳಕ್ಕೆ ಸ್ಥಳಾಂತರಿಸಿ ದಿನದ 24 ಗಂಟೆಗಳ ಕಾಲ (24×7) ಈ ಭಾಗದ ಸಾರ್ವಜನಿಕರಿಗೆ ಸೇವೆ ಸಲ್ಲಿಸಬೇ ಕೆಂ ಬ ನನ್ನ ಕನಸು ಈ ದಿನ ನನಸಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಯಾಕೆಂ ದರೆ ಔಷಧಾಲಯವು ಯಾವುದೇ ಆಸ್ಪತ್ರೆಯ ಜೀವನಾಡಿಯಾಗಿರುತ್ತದೆ. ರೋಗಿಗಳಿಗೆ ಕ್ಲಿಷ್ಟ ಸಮಯದಲ್ಲಿ ಔಷಧಿಗಳನ್ನು ವಿತರಿಸಲು ಈಗಿನ ವ್ಯ ವಸ್ಥೆ ತುಂಬ ಅನುಕೂಲವಾಗಿದೆ ಎಂದು ತಿಳಿಸಿದರು .
ಉದ್ಘಾಟಕರಾ ದ ಶ್ರೀ ಸೀತಾರಾಮ ಭಟ್.ಕೆ ಇವರು ಆಸ್ಪತ್ರೆಯ ಏಳಿಗೆಯಲ್ಲಿ ಇದೊಂದು ಮಹತ್ವದ ಹೆಜ್ಜೆ ಮತ್ತು ಇದರಿಂದ ಎಲ್ಲರಿಗೂ ಅನುಕೂಲವಾಗಲಿ ಎಂದು ಶುಭ ಹಾರೈಸಿದರು .
ಈ ಕಾರ್ಯಕ್ರಮದಲ್ಲಿ ಡಾ. ಭಾರತೀ .ಜಿ.ಕೆ, ಡಾ .ಆದಿತ್ಯ ರಾವ್, ಡಾ .ಅಂಕಿತ .ಜಿ ಭಟ್, ಡಾ .ನವ್ಯ ಭಟ್, ಡಾ .ಶ್ರೀ ಹರ್ಷ ತುಲುಪುಲೆ, ಡಾ. ದೀಕ್ಷಿತ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು .







