ಉಜಿರೆ: ಮನು ಉಜಿರೆ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನದ “ಶರಣು ಶರಣು ಶ್ರೀ ಗುರುರಾಘವೇಂದ್ರ” ಭಕ್ತಿಗೀತೆ ಲಾಯಿಲದ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶನಿವಾರ ನಡೆಯಿತು.
ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶ್ರೀ ಪಿತಾಂಬರ ಹೆರಾಜೆ, ಉದ್ಯಮಿ ಉಮೇಶ್ ಪ್ರಭು ಧರ್ಮಸ್ಥಳ ಅವರು ಹಾಡಿನ ಪೋಸ್ಟರ್ ಗಳನ್ನು ಹಾಗೂ ಧಾರ್ಮಿಕ ಮುಂದಾಳು ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ಅವರು ಹಾಡನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಿರ್ದೇಶಕ ಜಿ. ಕೃಷ್ಣ ಬೆಳ್ತಂಗಡಿ, ಉಜಿರೆ ಪ್ಲಾನೆಟ್ ಮೊಬೈಲ್ ಶಾಪ್ ಇದರ ಮಾಲಕ ಚಿದಾನಂದ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.







