ಧರ್ಮಸ್ಥಳ: ರಂಗ ಶಿವ ಕಲಾ ಬಳಗ ಧರ್ಮಸ್ಥಳ ವತಿಯಿಂದ ನಲಿಯೋಣು ಬಾ 2026 ಮಕ್ಕಳ ರಂಗ ಶಿಬಿರ ನಡೆಯುತ್ತಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ರವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಉತ್ತಮ ಗುಣಗಳನ್ನು ಹೊಂದುವುದು, ಹೊಸ ವಿಷಯಗಳ ಕಲಿಕೆ, ಒಳ್ಳೆಯ ಕೆಲಸಗಳನ್ನು ಡೈರಿಯಲ್ಲಿ ದಾಖಲಿಸಿ ಇಡುವುದು, ಅರಿವಿಗೆ ಬಾರದೇ ತಪ್ಪು ಗಳನ್ನು ಮಾಡಿದಾಗ ಅದನ್ನೂ ಸಹ ದಾಖಲಿಸಿ, ಅವುಗಳ ಬಗ್ಗೆ ವಿಮರ್ಶೆ ಮಾಡಿಕೊಂಡು ಮುಂದೆ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸುವುದು, ಆರೋಗ್ಯದ ಬಗ್ಗೆ ಕಾಳಜಿ ಹೊಂದುವುದು ಇತ್ಯಾದಿಗಳ ಬಗ್ಗೆ ಪ್ರೇರಣೆ ಮಾತುಗಳನ್ನಾಡಿದರು.
ಎಲ್ಲಾ ಮಕ್ಕಳು ಪ್ರತಿಭಾವಂತ ವಿದ್ಯಾರ್ಥಿಗಳಾಗಲು ಶುಭ ಹಾರೈಕೆ ಮಾಡಿ ಪ್ರತಿ ಮಕ್ಕಳಿಗೆ ಡೈರಿ ವಿತರಣೆ ಮಾಡಿದರು.
ಇದೇ ಶಿಬಿರದಲ್ಲಿ ವಿಪತ್ತು ನಿರ್ವಹಣೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು. ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ, ಬೆಳ್ತಂಗಡಿಯ ‘ಶೌರ್ಯ’ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ, ಉಜಿರೆ ಬೆಳಾಲು ಘಟಕದ ಘಟಕ ಪ್ರತಿನಿಧಿ ಸುಲೈಮಾನ್ ಇವರು ಉಪಸ್ಥಿತರಿದ್ದರು.
ರಂಗ ಶಿವ ಕಲಾ ಬಳಗದ ಸುನೀಲ್, ಸಂದೇಶ್, ಜಗದೀಶ್, ರಂಜಿತ್, ಅಭಿಷೇಕ್ ರಾವ್ ಮತ್ತು ತಂಡದ ಸದಸ್ಯರು ಇದ್ದರು.







