ಉಜಿರೆ: 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ 90 ವಿದ್ಯಾರ್ಥಿಗಳಲ್ಲಿ 37 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು 100% ಫಲಿತಾಂಶ ಬಂದಿರುತ್ತದೆ.
51 ವಿದ್ಯಾರ್ಥಿಗಳು ಪ್ರಥಮ ದರ್ಜೆ, 02 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಶಾಲೆಗೆ ಪ್ರಥಮ ಜೋಸ್ನಾ ಪ್ರಿಯಾ ಸೆರಾವೊ -608, ದ್ವಿತೀಯ ಅನನ್ಯ -605 ಹಾಗೂ ತೃತೀಯ ಅಭಿಜ್ಞಾ -599 ಯವರು ಗಳಿಸಿರುತ್ತಾರೆ. ಇವರನ್ನು ಶಾಲಾ ಸಂಚಾಲಕರಾದ ಫಾ! ಅಬೆಲ್ ಲೋಬೊ ಪ್ರಾಂಶುಪಾಲರಾದ ಫಾ! ವಿಜಯ್ ಲೋಬೊ, ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ.






