ಬೆಳ್ತಂಗಡಿ: ಕರ್ನಾಟಕ ಟೈಲರ್ಸ್ ಅಸೋಸಿಯನ್ ಬೆಳ್ತಂಗಡಿ ವಲಯ ಮತ್ತು ಕ್ಷೇತ್ರ ಸಮಿತಿ ಮತ್ತು ಎಜೆ ಡೆಂಟಲ್ ಹಾಸ್ಪಿಟಲ್, ಮಂಗಳೂರು ಇವರ ಸಹಭಾಗಿತ್ವದಲ್ಲಿ ಉಚಿತ ದಂತ ಚಿಕಿತ್ಸೆ, ಡೆಂಟಲ್ ಫಿಲ್ಲಿಂಗ್ ಮತ್ತು ವೀಲ್ ಚೇರ್ ವಿತರಣಾ ಕಾರ್ಯಕ್ರಮ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಧರ್ಮಸ್ಥಳ ಕಲಾಭವನದಲ್ಲಿ ನಡೆಯಿತು. ಸುರೇಂದ್ರ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಉದ್ಘಾಟನಾ ಕಾರ್ಯಕ್ರಮವನ್ನು ಸಂಪತ್ ಸುವರ್ಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಶೈಲೇಶ್ ಆರ್ ಜೆ. ಮತ್ತು ವಸಂತ ಪೂಜಾರಿ ನಿರ್ದೇಶಕರು ಟೈಲರ್ಸ್ ಬ್ಯಾಂಕ್, ಜಯಾಮಾಲ ಯೋಗೀಶ್, ಗೋಲ್ಡನ್ ಮೆಕವರ್ ಬ್ಯೂಟಿ ಪಾರ್ಲರ್,ಉಜಿರೆ ವಲಯದ ಅಧ್ಯಕ್ಷರಾದ ಜೀನತ್, ಕ್ಷೇತ್ರ ಸಮಿತಿಯ ಕಾರ್ಯದರ್ಶಿಯಾದ Lancy D’Souza. ಉಪಸ್ಥಿತಿಯಲ್ಲಿದ್ದರು.







