ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ತಾಲೂಕಿನ ಪ್ರಮುಖ ಪ್ರದೇಶಗಳಲ್ಲಿ ಮೇ 21ರ ಗುರುವಾರ ದಿನವಿಡೀ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ. ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಪ್ರಯುಕ್ತ, ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಬೇರೆಡೆಗೆ ಸ್ಥಳಾಂತರಿಸುವ ತುರ್ತು ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರಣದಿಂದಾಗಿ ಗ್ರಾಹಕರು ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಗುರುವಾಯನಕೆರೆ, ಮೇಲಂತಬೆಟ್ಟು, ಹಳೆಕೋಟೆ, ಚರ್ಚ್ ರೋಡ್, ಹುಣ್ಸೆಕಟ್ಟೆ, ಗೇರುಕಟ್ಟೆ, ನಾಳ, ಜಾರಿಗೆಬೈಲು, ಗೋವಿಂದೂರು, ಮಾವಿನಕಟ್ಟೆ, ಪರಪ್ಪು, ರೇಷ್ಮೆರೋಡ್, ಪಣೆಜಾಲು, ಮಲ್ಲೊಟ್ಟು ಮತ್ತು ಎರುಕಡಪು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಮೇ 21ರಂದು ಬೆಳಿಗ್ಗೆ ಗಂಟೆ 9.30ರಿಂದ ಸಂಜೆ ಗಂಟೆ: 5.30ರ ತನಕ ವಿದ್ಯುತ್ ನಿಲುಗಡೆ ಆಗಲಿದೆ.
ಈ ಭಾಗದ ಸಾರ್ವಜನಿಕರು ಹಾಗೂ ಕೈಗಾರಿಕಾ ಸಂಸ್ಥೆಗಳು ವಿದ್ಯುತ್ ವ್ಯತ್ಯಯವನ್ನು ಗಮನಿಸಿ, ಮೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಪ್ರಕಟಣೆ ಕೋರಿದೆ.




