ಪಾರೆಂಕಿ: ದಾಂಪತ್ಯ ಜೀವನದಲ್ಲುಂಟಾದ ಏರುಪೇರು ಹಾಗೂ ನಿರಂತರ ಗಲಾಟೆಯಿಂದ ಮನನೊಂದ ವಿವಾಹಿತ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾರೆಂಕಿ ಗ್ರಾಮದ ಸಾಲುಮರ ಎಂಬಲ್ಲಿ ನಡೆದಿದೆ.
ಬಂಗೇರ ಕಟ್ಟೆ ನಿವಾಸಿ ಕೂಲಿಕೆಲಸಗಾರ ಧನಂಜಯ ಎಂಬವರ ಪತ್ನಿ ಸಂಧ್ಯಾ(27ವ) ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಪತಿ ಧನಂಜಯನನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಒಂದೂವರೆ ವರ್ಷದ ಮಗುವಿದೆ ಎಂದು ತಿಳಿದು ಬಂದಿದೆ.







