ಪುತ್ತೂರು: ಮರದ ಗೆಲ್ಲು ಕಡಿಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಪೆರ್ನೆ ಗ್ರಾಮದ ಚಿಂಕ್ರಗುರಿ ಎಂಬಲ್ಲಿ ನಡೆದಿದೆ.

ಪೆರ್ನೆ ಗ್ರಾಮದ ಚಿಂಕ್ರಗುರಿ ನಿವಾಸಿ ಚಂದಪ್ಪ ಪೂಜಾರಿ ಮೃತಪಟ್ಟ ವ್ಯಕ್ತಿ.
ಚಂದಪ್ಪ ಪೂಜಾರಿ ಅವರು ಮರದ ಗೆಲ್ಲು ಕಡಿಯುತ್ತಿದ್ದಾಗ, ಹತ್ತಿರದಲ್ಲೇ ಹಾದುಹೋಗಿದ್ದ ಹೈ-ಟೆನ್ಷನ್ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ
ಸ್ಪರ್ಶವಾಗಿದೆ. ಪರಿಣಾಮ ತೀವ್ರ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಸ್ಥಳದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರಾದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.






