ಪುತ್ತೂರು: ಯುವಕನೊಬ್ಬ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜುಲೈ 6ರಂದು ಇರ್ದೆಯಲ್ಲಿ ಸಂಭವಿಸಿದೆ.

ಇರ್ದೆ ಗ್ರಾಮದ ಮಣ್ಣಾಪು ನಿವಾಸಿ ಗಂಗಾಧರ ಮಡಿವಾಳ ಎಂಬುವವರ ಪುತ್ರ ತಿಲಕ್ (18 ವರ್ಷ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ.
ಜುಲೈ 6ರಂದು ಮಧ್ಯಾಹ್ನದ ವೇಳೆ ತಿಲಕ್ ತನ್ನ ಮನೆಯ ಕೋಣೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಯುವಕನ ಈ ನಿರ್ಧಾರಕ್ಕೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.





