ಕೇರಳ: ಸೋದರಸಂಬಂಧಿ ಸಹೋದರಿಯ ಮದುವೆಯ ಸಂಭ್ರಮದಲ್ಲಿದ್ದ ಆ ಯುವಕರು, ಬೆಂಗಳೂರಿನಿಂದ ಖುಷಿ ಖುಷಿಯಾಗಿಯೇ ಹೊರಟಿದ್ರು… ಆದ್ರೆ ಮನೆಗೆ ತಲುಪಲು ಕೇವಲ 20 ಕಿಲೋಮೀಟರ್ ಇರುವಾಗ ವಿಧಿ ಆಡಿದ ಆಟ ಎಲ್ಲವನ್ನೂ ಉಲ್ಟಾ ಪಲ್ಟಾ ಮಾಡಿಬಿಟ್ಟಿದೆ.

ಕೇರಳದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವ ಇಂಜಿನಿಯರ್ಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಆಪ್ತ ಸ್ನೇಹಿತರ ಪೈಕಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.
ಮೃತಪಟ್ಟ ದುರ್ದೈವಿಗಳನ್ನು ಕಣ್ಣೂರಿನ ಶಾನ್ ಸಿರಾಜ್, ಕಾಂಞಂಗಾಡ್ನ ಮೊಹಮ್ಮದ್ ರಿಜ್ವಾನ್, ನವದೆಹಲಿಯ ಪರಮ ಛಟ್ರಿ ಹಾಗೂ ಹೈದರಾಬಾದ್ನ ಹರ್ಷ್ ಸಥರಿ ಎಂದು ಗುರುತಿಸಲಾಗಿದೆ. ಎಲ್ಲರಿಗೂ ಕೇವಲ 21 ವರ್ಷ ವಯಸ್ಸಾಗಿತ್ತು.

ಇನ್ನು ಕಾರಿನಲ್ಲಿದ್ದ ಮತ್ತೊಬ್ಬ ಸ್ನೇಹಿತ, ತ್ರಿಶೂರ್ ಮೂಲದ ಆದಿತ್ಯ ಕೃಷ್ಣನ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ದುವೆಯ ಸಂಭ್ರಮದಲ್ಲಿದ್ದ ಕುಟುಂಬಗಳಲ್ಲಿ ಈಗ ಕಣ್ಣೀರು ಮುಗಿಲು ಮುಟ್ಟಿದೆ.






