ಉಜಿರೆ: “ಪ್ರತಿಭೆಗಳನ್ನು ಬಳಸಲು ಅವಕಾಶ ಸಿಕ್ಕಿದಾಗ ಅದನ್ನು ಸರಿಯಾಗಿ ಬಳಸಿಕೊಂಡು ಬೆಳೆಸಿಕೊಂಡರೆ ಅದ್ಭುತ ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ.


ಭಿತ್ತಿ ಪತ್ರಿಕೆಗಳ ಜೊತೆ ನೀವು ಇಷ್ಟ ಪಟ್ಟು ತೊಡಗಿಸಿಕೊಂಡರೆ ಮುಂದೆ ಕಲೆ ಮತ್ತು ಬರವಣಿಗೆಯ ಮಾಧ್ಯಮ ದಲ್ಲಿ ಅದೇ ನಿಮ್ಮನ್ನು ಬೆಳೆಸುತ್ತದೆ.
ಭಿತ್ತಿ ಪತ್ರಿಕೆಗಳು ಆಕರ್ಷಕವಾಗಿ ಮಾತ್ರವಲ್ಲದೆ ಸ್ವಂತಿಕೆ ಮತ್ತು ಸೃಜನಾತ್ಮಕ ತೆಯಿಂದ ಕೂಡಿರಲಿ” ಎಂದು ಶ್ರೀ ಧ. ಮಂ. ಕಾಲೇಜು ( ಸ್ವಾಯತ್ತ ) ಉಜಿರೆ ಇಲ್ಲಿನ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಮುಖ್ಯಸ್ಥ ಪ್ರಸ್ತುತ “ಮಂಜುವಾಣಿ” ಪತ್ರಿಕೆಯ ಸಂಪಾದಕರ ಡಾ. ಭಾಸ್ಕರ ಹೆಗಡೆ ಅವರು ತಿಳಿಸಿದರು.

ಅವರು ಇತ್ತೀಚೆಗೆ ಶ್ರೀ ಧ. ಮಂ. ಪದವಿ ಪೂರ್ವ ಕಾಲೇಜು, ಉಜಿರೆಯಲ್ಲಿ ” ಭಿತ್ತಿಪತ್ರಿಕೆ ಅನಾವರಣ ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾದ, ಮಾಹಿತಿಪೂರ್ಣವಾದ ಸಂಗತಿಗಳನ್ನು ಮತ್ತು ತಮ್ಮ ಅನುಭವಕ್ಕೆ ಬಂದ ವಿದ್ಯಾರ್ಥಿ ಸಾಧಕರ ಬಗ್ಗೆ ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲರ ಪ್ರಮೋದ್ ಕುಮಾರ್ ಬಿ. ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಒಳ್ಳೆಯ ಭಾವನೆಗಳನ್ನು, ವಿಚಾರಗಳನ್ನು, ಅನಿಸಿಕೆಗಳನ್ನು ಪ್ರಕಟಿಸಲು ಭಿತ್ತಿ ಪತ್ರಿಕೆಯನ್ನು ವೇದಿಕೆಯಾಗಿ ಬಳಸಿಕೊಳ್ಳಿ. ಆ ಮೂಲಕ ನಿಮ್ಮ ಪ್ರತಿಭೆ ಹೊರಬರಲಿ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ ಹಾಗೂ ಕಾರ್ಯಕಾರಿ ಸಮಿತಿ ಮುಖ್ಯಸ್ಥೆ ವೈದೇಹಿ ಎಸ್, ಸದಸ್ಯರಾದ ಸುಭಾಷ್ ರಾವ್ ಬೋಳೂರು, ಮನೋಹರ್ ಶೆಟ್ಟಿ, ಅಶ್ವಿನಿ ಎಚ್ ಆರ್, ಅಂಬಿಕಾ ಕೆ ಹಾಗೂ ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಚಾರಿತ್ರ ಜೈನ್ ಕಾರ್ಯಕ್ರಮ ನಿರೂಪಿಸಿ, ರಚನ ಬಿ.ಜೆ.ಅತಿಥಿ ಪರಿಚಯ ನೀಡಿ, ಭಾಗ್ಯಲಕ್ಷ್ಮಿ ಸ್ವಾಗತಿಸಿ, ಸ್ಮೃತಿ ಧನ್ಯವಾದ ಸಲ್ಲಿಸಿದರು.






