ಉಜಿರೆ: ಉಜಿರೆಯ ಎಸ್.ಡಿ.ಎಂ ಕಾಲೇಜು ರಸ್ತೆಯಲ್ಲಿರುವ ಅರಿಪ್ಪಾಡಿ ಮಠ ಬಿಲ್ಡಿಂಗ್ನಲ್ಲಿ ಕಾರ್ಯಾಚರಿಸುತ್ತಿರುವ ‘ಹೊಟೇಲ್ ದಿಶಾ ಫುಡ್ ಕಾರ್ನರ್’ ಗೆ ಪ್ರತಿಷ್ಠಿತ ‘ಝೊಮಾಟೋ ರೆಸ್ಟೋರೆಂಟ್ ಅವಾರ್ಡ್ಸ್ 2026’ ಲಭಿಸಿದೆ.”

ಉತ್ತಮ ಗುಣಮಟ್ಟದ ಹಾಗೂ ಖ್ಯಾತಿಯ ದಕ್ಷಿಣ ಭಾರತೀಯ ಶೈಲಿಯ ತಿನಿಸುಗಳಿಗೆ ಹೆಸರಾಗಿರುವ ಹೊಟೇಲ್ ದಿಶಾ ಫುಡ್ ಕಾರ್ನರ್, 2026ರ ಸಾಲಿನ ‘ಬೆಸ್ಟ್ ಇನ್ ಸೌತ್ ಇಂಡಿಯನ್’ (Best in South Indian) ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.










