ಉಡುಪಿ: ತಾನು ಮುಂದೆ ಏನಾಗಬೇಕು, ಯಾವ ರೀತಿ ಬದುಕಬೇಕು, ಯಾವ ಶಿಕ್ಷಣ ಪಡೆಯಬೇಕು, ತನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಹಾಗೂ ದೇಶವನ್ನು ಹೇಗೆ ಗೌರವಿಸಬೇಕು ಎಂಬ ಉನ್ನತ ಮೌಲ್ಯಗಳು ಅಗ್ನಿವೀರ್ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ‘ಭಾರತ್ ಭಾರತಿ’ ಸಂಸ್ಥೆಯ ಸೈನಿಕ ವಿಭಾಗದ ದಕ್ಷಿಣ ಪ್ರಾಂತ ಸಂಯೋಜಕರಾದ ಶ್ರೀಪಾದ್ ಭಟ್ ಹೇಳಿದರು.

ನಗರದ ಸರಕಾರಿ ಬೋರ್ಡ್ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘ಅಗ್ನಿಪಥ್ – ಅಗ್ನಿವೀರ್ ತರಬೇತಿ ಪೂರ್ವ ಮಾಹಿತಿ ಶಿಬಿರ’ದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ’ವಿಕಸಿತ ಭಾರತ’ದ ಕನಸಿನ ಆಶಯದಂತೆ, ದೇಶಾದ್ಯಂತ ಪದವಿ ಪೂರ್ವ ವಿದ್ಯಾರ್ಥಿಗಳು ತಮ್ಮ ಸ್ವಂತ ಭವಿಷ್ಯವನ್ನು ತಾವೇ ಧೈರ್ಯವಾಗಿ ನಿರ್ಧರಿಸಲು ಅಗ್ನಿವೀರ್ ತರಬೇತಿ ಅತ್ಯಂತ ಪೂರಕವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

”ಮುಂದಿನ ದಿನಗಳಲ್ಲಿ ಯುದ್ಧಗಳು ಸಂಪೂರ್ಣ ತಂತ್ರಜ್ಞಾನ ಆಧಾರಿತವಾಗಿ ನಡೆಯಲಿವೆ ಆದ್ದರಿಂದ ಸೈನಿಕರ ಯು ದ್ದ ಕ್ಕಿಂತಲೂ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಶಿಸ್ತಿನ ಜೀವನ ನಡೆಸಿ, ದೃಢ ಆರ್ಥಿಕತೆ ಹಾಗೂ ಆರೋಗ್ಯವಂತ ಜೀವನ ಕಟ್ಟಿಕೊಳ್ಳಲು ಅಗ್ನಿವೀರ್ ತರಬೇತಿಯೇ ಬಲವಾದ ಅಡಿಪಾಯ.* ಶ್ರೀಪಾದ್ ಭಟ್, ಸಂಯೋಜಕರು ನುಡಿದರು.
ಉಡುಪಿಯ ಗಣೇಶ್ ರಾವ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಆಯೋಜನೆ: ಕಾಲೇಜಿನ ಮುಖ್ಯೋಪಾಧ್ಯಾಯರಾದ ನಾಗರಾಜ್ ಅವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು.

ಸಹಕಾರ: ಕಾಲೇಜಿನ ಎನ್.ಎಸ್.ಎಸ್ (NSS) ಘಟಕ, ಅಧ್ಯಾಪಕ ವೃಂದ ಹಾಗೂ ಸಮಾಜ ಸೇವಕರಾದ ಸಂತೋಷ್ ಎಂ. ಶೆಟ್ಟಿಗಾರ್ ಅವರು ಕಾರ್ಯಕ್ರಮದ ಯಶಸ್ಸಿಗೆ ಪೂರ್ಣ ಸಹಕಾರ ನೀಡಿದರು.
ಶಿಬಿರದಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾರ್ಥಿಗಳು ಅಗ್ನಿವೀರ್ ಯೋಜನೆ ಮತ್ತು ದೇಶಸೇವೆಯ ಕುರಿತು ಉಪಯುಕ್ತ ಮಾಹಿತಿ ಪಡೆದುಕೊಂಡರು.








