ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಲಯನ್ ರಘುರಾಮ ಶೆಟ್ಟಿ ಸಾಧನಾ, ಕಾರ್ಯದರ್ಶಿಯಾಗಿ ಲಯನ್ ಅಮಿತಾನಂದ ಹೆಗ್ಡೆ ಹಾಗೂ ಕೋಶಾಧಿಕಾರಿಯಾಗಿ ಲಯನ್ ನಾಣ್ಯಪ್ಪ ನಾಯ್ಕ ಕೆ. ಆಯ್ಕೆಯಾಗಿದ್ದಾರೆ.


ನಿಕಟಪೂರ್ವ ಅಧ್ಯಕ್ಷರಾಗಿ ಲಯನ್ ಮುರಳಿ ಬಲಿಪ, ಜತೆ ಕಾರ್ಯದರ್ಶಿಯಾಗಿ ದತ್ತಾತ್ರೇಯ ಗೊಲ್ಲ, ಉಪಾಧ್ಯಕ್ಷರಾಗಿ ಸುರೇಶ್ ಶೆಟ್ಟಿ, ವಿನ್ಸೆಂಟ್ ಟಿ. ಡಿಸೋಜಾ ಹಾಗೂ ತಂಗಚ್ಚನ್ ಆಯ್ಕೆಯಾಗಿದ್ದಾರೆ.

ಸೇವಾ ವಿಭಾಗದ ಸಂಯೋಜಕರಾಗಿ ವಸಂತ ಶೆಟ್ಟಿ ಶ್ರದ್ಧಾ, ವಿವಿಧ ಕಾರ್ಯಕ್ರಮಗಳ ಸಂಯೋಜಕರಾಗಿ ಧರಣೇಂದ್ರ ಕೆ. ಜೈನ್, ಸಂಪಾದಕರಾಗಿ ಕೆ. ಕೃಷ್ಣ ಆಚಾರ್ಯ, ತರಬೇತಿ ಸಂಯೋಜಕರಾಗಿ ನಿತ್ಯಾನಂದ ನಾವರ, ಲಾಂಗೋಲ ಚಾಲಕರಾಗಿ ರಾಮಕೃಷ್ಣ ಗೌಡ ಎಚ್., ಎಲ್ಸಿಎಫ್ ಸಂಯೋಜಕರಾಗಿ ಗೋಪಾಲಕೃಷ್ಣ ಕಾಂಚೋಡ್, ಪತ್ರಿಕಾ ಪ್ರತಿನಿಧಿಯಾಗಿ ತುಕಾರಾಮ ಬಿ., ಕ್ರೀಡಾ ಸಂಯೋಜಕರಾಗಿ ಅನಂತಕೃಷ್ಣ, ಕೃಷಿ ಸಂಯೋಜಕರಾಗಿ ಪ್ರಭಾಕರ ಗೌಡ ಬೊಲ್ಯ, ಸದಸ್ಯತ್ವ ಅಭಿವೃದ್ಧಿ ಅಧಿಕಾರಿಯಾಗಿ ರವೀಂದ್ರ ಶೆಟ್ಟಿ ಬಳೆಂಜ, ಲಿಯೋ ಮಾರ್ಗದರ್ಶಕರಾಗಿ ಲಯನ್ ರಮೇಶ್ ಫೈಲಾರ್, ವ್ಯವಹಾರ ಮತ್ತು ಸಂವಹನ ಅಧಿಕಾರಿಯಾಗಿ ಅಶ್ರಫ್ ಆಲಿ, ಶಿಕ್ಷಣ ಸಂಯೋಜಕರಾಗಿ ರಾಜೇಂದ್ರ ಅದ್ರೆ, ಪಿಆರ್ಒ ಆಗಿ ಲಯನ್ ಭುಜಬಲಿ, ಕಲಾ ಸಂಯೋಜಕರಾಗಿ ಪ್ರವೀಣ ಎಚ್.ಎಸ್., ಪರಿಸರ ಸಂಯೋಜಕರಾಗಿ ಮೋಹನ್, ಸಾಂಸ್ಕೃತಿಕ ಸಂಯೋಜಕರಾಗಿ ದೇವಿಪ್ರಸಾದ್ ಬೊಲ್ಯ, ರಾಷ್ಟ್ರೀಯ ಹಬ್ಬಗಳ ಸಂಯೋಜಕರಾಗಿ ಗಂಗಾಧರ ರೈ ಹಾಗೂ ಧಾರ್ಮಿಕ ಹಬ್ಬಗಳ ಸಂಯೋಜಕರಾಗಿ ಚಂದ್ರಶೇಖರ ಶೆಟ್ಟಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ವಿಶ್ವನಾಥ ಆರ್. ನಾಯಕ್, ಜಯಂತ ಶೆಟ್ಟಿ, ಹೇಮಂತ ರಾವ್, ಉಮೇಶ್ ಶೆಟ್ಟಿ, ಲಕ್ಷ್ಮೀನಾರಾಯಣ ಪಿ., ಸುರೇಂದ್ರ ಎಸ್., ದೇವಿಪ್ರಸಾದ್ ಜೈ ಕನ್ನಡಮ್ಮ, ಶಿವಕಾಂತೆ ಗೌಡ, ಎಂ. ಜಯರಾಮ ಭಂಡಾರಿ, ಸುಶೀಲ ಎಸ್. ಹೆಗ್ಡೆ, ಪಾಲಾಕ್ಷ ಪಿ. ಸುವರ್ಣ, ದೇವದಾಸ್ ಶೆಟ್ಟಿ ಹಿಬರೋಡಿ, ಅಶೋಕ್ ಕುಮಾರ್ ಬಿ.ಪಿ., ರಾಜು ಶೆಟ್ಟಿ ಬಿ., ಪ್ರಕಾಶ್ ಶೆಟ್ಟಿ ನೊಚ್ಚ, ಕಿರಣ್ ಕುಮಾರ್ ಶೆಟ್ಟಿ, ಮೇದಿನಿ ಡಿ. ಹಾಗೂ ಲಕ್ಷ್ಮಣ ಪೂಜಾರಿ ಆಯ್ಕೆಯಾಗಿದ್ದಾರೆ.

ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ನ ಪದಗ್ರಹಣ ಸಮಾರಂಭವು ಜುಲೈ 25ರಂದು ಸಂಜೆ 6.30ಕ್ಕೆ ಬೆಳ್ತಂಗಡಿಯ ನೂತನ ಲಯನ್ಸ್ ಸೇವಾ ಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಶಶಿಧರ ಶೆಟ್ಟಿ ಬರೋಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ವೆಂಕಟೇಶ್ ಹೆಬ್ಬಾರ್ ಪದಗ್ರಹಣ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.






