ಇಂದಬೆಟ್ಟು: ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ದರ್ಣಪ್ಪ ಮೂಲ್ಯ ನಾವೂರು ಅವರ ಅಧ್ಯಕ್ಷತೆಯಲ್ಲಿ ಜುಲೈ 26 ರಂದು ಯಶಸ್ವಿಯಾಗಿ ನಡೆಯಿತು.

ದೇವಸ್ಥಾನದ ಆವರಣದಲ್ಲಿ ಜರುಗಿದ ಈ ಸಭೆಯಲ್ಲಿ ಸರ್ವಾನುಮತದಿಂದ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಪದಾಧಿಕಾರಿಗಳ ವಿವರ:
ಅಧ್ಯಕ್ಷರು: ಸತೀಶ್ ಗೌಡ ಚೌಕದಕಟ್ಟೆ, ಉಪಾಧ್ಯಕ್ಷರುಗಳು, ಸಂತೋಷ್ ಗೌಡ ಕೊಯಮಜಲು, , ನಾರಾಯಣ ಗೌಡ ಕುಂಡಡ್ಕ ಕೊರಗಪ್ಪ ಗೌಡ ಎಟ್ಟಿಬೆಟ್ಟು, ಕೆ. ದೇಜಪ್ಪ ಗೌಡ ಕೆರೆಕೊಡಿ ಕಜೆ.


ಪ್ರಧಾನ ಕಾರ್ಯದರ್ಶಿ, ಪ್ರದೀಪ್ ಗೌಡ ನಾಗಾಜೆ, ಕಾರ್ಯದರ್ಶಿಗಳು ಪ್ರಶಾಂತ್ ಉಂಬೇಜೆ, ಸುಂದರ ಎ ಇಂದಬೆಟ್ಟು, ಹರಿಕಿರಣ್ ಯು. ಪ್ರಭು, ಕೋಶಾಧಿಕಾರಿ, ಸಂತೋಷ್ ಎಂ. ಬೆದ್ರಬೆಟ್ಟು.

ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಕಾಂಜಾನು, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್ ಎಸ್ ಇಂದಬೆಟ್ಟು ಸೇರಿದಂತೆ ಪ್ರಮುಖರಾದ ಹರೀಶ್ ಸಾಲ್ಯಾನ್ ಮೊರ್ತಾಜೆ, ವಸಂತ ಗೌಡ ಕಲ್ಲಾಜೆ, ನಾರಾಯಣ ಟೈಲರ್ ಇಂದಬೆಟ್ಟು, ದರ್ಣಪ್ಪ ಗೌಡ ಬೆದ್ರಬೆಟ್ಟು, ಗಣೇಶ್ ಗೌಡ ನಾವೂರು, ವಿನೋದ್ ಪ್ರಸಾದ್ ಕಲ್ಲಾಜೆ ಹಾಗೂ ಅವಿನಾಶ್ ಸೋಮಯ್ಯದಡ್ಡು ಉಪಸ್ಥಿತರಿದ್ದರು.






