ಬೆಳ್ತಂಗಡಿ: ಶ್ರೀ ಕೃಷ್ಣ ಭಜನಾ ಮಂದಿರ ವಾಣಿ ನಗರದಲ್ಲಿ ಭಜನಾ ಕಮ್ಮಟ ಆಯೋಜನ ಸಮಿತಿ ಎಣ್ಮಕಜೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಮಂಜೇಶ್ವರ ನವಂಬರ್ 14 ಶನಿವಾರ ಹಾಗೂ 15 ಭಾನುವಾರದಂದು ಭಜನಾ ಕಮ್ಮಟ ನಡೆಯಲಿದ್ದು

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀ ಜಗದ್ಗುರು ಶಂಕರಾಚಾರ್ಯ ಮಠ ಎಡನೀರು ,ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇವರುಗಳು ಧಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಲಿದ್ದಾರೆ.

ಈ ಕಾರ್ಯಕ್ರಮವು ಸಂಕೀರ್ತನಾಕಾರರಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶಂಕರ್ ಶಾನುಭೋಗ್ ಖ್ಯಾತ ಗಾಯಕರು ಭಜನಾ ತರಬೇತುದಾರರು ಬೆಂಗಳೂರು. ಸತ್ಯನಾರಾಯಣ ಪುಣಿಚಿತ್ತಾಯ ಖ್ಯಾತ ಯಕ್ಷಗಾನ ಭಾಗವತರು.
ಕಿಶೋರ್ ಪೆರ್ಲ ಖ್ಯಾತ ಗಾಯಕರು ವೀಣಾ ಖ್ಯಾತ ಭಜನಾ ತರಬೇತುದಾರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು.
ಪೂಜ್ಯ ಖಾವಂದರಿಗೆ, ಅವರ ಆಪ್ತ ಕಾರ್ಯದರ್ಶಿಗಳಾರ ಶ್ರೀ ಎ ವೀರು ಶೆಟ್ಟಿಯವರಿಗೆ,ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಶ್ರೀ ಜಿ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಮತ್ತಿತರ ಪ್ರಮುಖರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ರಾಮಕೃಷ್ಣ ಕಾಟುಕುಕ್ಕೆ, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು, ಪುನೀತ್ ವಾಣಿನಗರ ಪ್ರಧಾನ ಕಾರ್ಯದರ್ಶಿಗಳು, ಚಿದಾನಂದ ಆಚಾರ್ಯ ಪೆರ್ಲ ಉಪಾಧ್ಯಕ್ಷರು,ಕೃಷ್ಣ ನಾಯ್ಕ್ ವಾಣಿ ನಗರ ಸಂಚಾಲಕರು , ಪವಿತ್ರ ಸರ್ಪಗಳ ಸಮಿತಿ ಸದಸ್ಯರು ,ನರಸಿಂಹ ಕುಲಾಲ್ ವಾಣಿ ನಗರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.





