ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಯ ಭಕ್ತಿಗೀತೆ ಬಿಡುಗಡೆ ಸಮಾರಂಭ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಬಸ್ರೂರು ವಹಿಸಿದ್ದರು.
ಭಕ್ತಿಗೀತೆ ಲೋಕಾರ್ಪಣೆ ಯನ್ನು ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಗೌರವಾಧ್ಯಕ್ಷರು ಶ್ರೀ ಮಹಾಲಿಂಗೇಶ್ವರ ಭಜನಾ ಸಮಿತಿ ಅವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಭಕ್ತಿ ಗೀತೆಯ ಸಾಹಿತ್ಯ ಶ್ರೀ ಎಂ ಎಸ್ ಗಿರಿಧರ್ ಗಾಯಕರು ಹಾಗೂ ನಿರ್ಮಾಣ ಮಾಡಿದವರು ಶ್ರೀಯುತ ಮಂಜುನಾಥ ಭಕ್ತಿ ಗೀತೆಗೆ ಕುಣಿತ ಸಂಯೋಜನೆಯನ್ನು ವೀರ ಮಾರುತಿ ಭಜನಾ ಮಂಡಳಿ ಹಳನಾಡು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿಗಳು ಶ್ರೀ ರಾಮ್ ಕಿಶನ್ ಹೆಗ್ಡೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದಂತಹ ಶ್ರೀ ಬಾಂಡ್ಯ ಸುಭಾಷ್ ಚಂದ್ರ ಶೆಟ್ಟಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದಂತಹ ದೇವಾನಂದ ಶೆಟ್ಟಿ ಶೆಟ್ಟಿ, ಪರಿಷತ್ತಿನ ಗೌರವ ಸಲಹೆಗಾರರಾದ ಶ್ರೀಮತಿ ಅನುರಾಧ ನಾಯಕ್, ಯೋಜನಾಧಿಕಾರಿಗಳಾದ ಶ್ರೀ ಉಮೇಶ್ ಶೆಟ್ಟಿ, ಶ್ರೀ ಸುಧಾಕರ್ ಶೆಟ್ಟಿ, ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್ ಉಪಸ್ಥಿತರಿದ್ದರು.
ವೀರ ಮಾರುತಿ ಭಜನಾ ಮಂಡಳಿಯ ಅಧ್ಯಕ್ಷರಾದ ಉದಯ್ ರವರು ಸರ್ವರನ್ನು ಸ್ವಾಗತಿಸಿದರು. ಪರಿಷತ್ತಿನ ಗೌರವ ಸಲಹೆಗಾರರಾದ ನರಸಿಂಹ ಪೂಜಾರಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀ ಮಹಾಲಿಂಗೇಶ್ವರ ಭಜನಾ ಸಮಿತಿಯ ಸರ್ವ ಸದಸ್ಯರು ವಲಯದ ಎಲ್ಲಾ ಭಜನಾ ಮಂಡಳಿಯ ಅಧ್ಯಕ್ಷರು,ಕಾರ್ಯದರ್ಶಿಗಳು,ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ನಂತರ ಕುಣಿತ ಭಜನಾ ಸೇವೆ ನೆರವೇರಿತು.






