ಮಾಣಿ : ತುಳುನಾಡಿನ ಮಣ್ಣಿನ ಸೊಗಡು, ಕೃಷಿ ಸಂಸ್ಕೃತಿ ಹಾಗೂ ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಅಕ್ಟೋಬರ್ 17ರಂದು ಬಿಲ್ಲವ ಕಿರೋಡಿಯನ್ಸ್ ಕುಟುಂಬಸ್ಥರ ಚಾವಡಿಯಲ್ಲಿ ‘ಪುದ್ದಾರ್ದ ಪೊರ್ಲು’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಮಾತುಗಾರರಾದ ಲೋಕನಾಥ್ ತಿಮರಾಜೆ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಭತ್ತ ಮತ್ತು ಅನ್ನಕ್ಕೆ ನೀಡುತ್ತಿದ್ದ ಮಹತ್ವವನ್ನು ವಿವರಿಸಿದರು. ಭತ್ತವನ್ನು ದೈವಸ್ವರೂಪವಾಗಿ ಕಂಡು, ಅನ್ನವನ್ನು ದೇವರ ಪ್ರಸಾದವೆಂದು ಗೌರವಿಸಿ, ಹೊಸ ಭತ್ತದ ಆಗಮನದ ಸಂದರ್ಭದಲ್ಲಿ ಪೂಜೆ-ಪುನಸ್ಕಾರಗಳನ್ನು ನೆರವೇರಿಸುವ ಸಂಪ್ರದಾಯ ನಮ್ಮ ಹಿರಿಯರಲ್ಲಿತ್ತು. ಅನ್ನವೆಂದರೆ ಕೇವಲ ಆಹಾರವಲ್ಲ, ಅದು ಬದುಕಿನ ಆಧಾರ ಮತ್ತು ದೈವಿಕ ಸ್ವರೂಪ ಎಂಬ ಸಂದೇಶವನ್ನು ತಿಳಿಸಿದರು.


ಈ ಸಂದರ್ಭದಲ್ಲಿ ಕಿರೋಡಿಯನ್ಸ್ ಕುಟುಂಬದ ಮುಖ್ಯಸ್ಥರಾದ ಧರ್ಮಣ ಪೂಜಾರಿ, ಸುರೇಶ್ ಶಾಂತಿ, ದರ್ಣಪ್ಪ ಪೂಜಾರಿ, ರಾಜೇಶ್, ಸತೀಶ್, ಲೋಕೇಶ್, ಶ್ರೀಧರ್ ಪೂಜಾರಿ ಮುಜಲ, ಮೋಹನ್ ಪೂಜಾರಿ, ಬಾಲಕೃಷ್ಣ ಕೆರಕೋಡಿ, ಶುಭ, ಲಕ್ಷ್ಮಿ, ಪ್ರೇಮ ಸೇರಿದಂತೆ ಕಿರೋಡಿಯನ್ಸ್ ಕುಟುಂಬದ ಸದಸ್ಯರು ಹಾಗೂ ಯುವವಾಹಿನಿ ಸದಸ್ಯರು, ಯುವವಾಹಿನಿ ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಹರೀಶ್ ಪೂಜಾರಿ ಬಾಕಿಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಪೂಜಾರಿ ಕೊಡಾಜೆ ಅವರು ಸ್ವಾಗತಿಸಿದರು. ಘಟಕದ ಕೋಶಾಧಿಕಾರಿ ತ್ರಿವೇಣಿ ರಮೇಶ್ ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗೈದರು.





