ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡಿನ ಬದಿಯಡ್ಕ ವಲಯ ಭಜನಾ ಪರಿಷತ್ ಸಂಸ್ಕೃತಿ ಸಭಾ ಭವನದಲ್ಲಿ ನಡೆಯಿತು.

ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ವೆಂಕಟರಮಣ ಹೊಳ್ಳರವರು ದೀಪ ಬೆಳಗಿಸಿದರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ರವರು ಪರಿಷತ್ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.

ಯೋಜನಾಧಿಕಾರಿಗಳಾದ ದಿನೇಶ್ ರವರು ಭಜನಾ ಕಾರ್ಯಕ್ರಮ ಹಾಗೂ ಪರಿಷತ್ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ವಲಯಾಧ್ಯಕ್ಷರಾಗಿ ಶ್ರೀಮತಿ ಸಿಂಧು ಉಪಾಧ್ಯಕ್ಷರಾಗಿ ಹರೀಶ್,ಪದ್ಮಾವತಿ ಕಾರ್ಯದರ್ಶಿಯಾಗಿ ಹರಿಣಾಕ್ಷಿ,ಜೊತೆ ಕಾರ್ಯದರ್ಶಿಯಾಗಿ ಆಶಾ ಟೀಚರ್, ಕೋಶಾಧಿಕಾರಿಯಾಗಿ ರಮೇಶ್ ರವರು ಆಯ್ಕೆಯಾದರು. ವಲಯದ ಎಲ್ಲಾ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರಾದ ಮೋನಪ್ಪ ಕಾರ್ಯಕ್ರಮ ನಿರೂಪಿಸಿದರು. ಜಲಜಾಕ್ಷಿ ಸ್ವಾಗತಿಸಿದರು,ಬೇಬಿ ಧನ್ಯವಾದವಿತ್ತರು.





