ವಾಮದಪದವು : ನಾರಾಯಣಗುರುಗಳು ಸರ್ವೇಶ್ವರನ ಅವತಾರ ಪುರುಷರಾಗಿ ಮಾನವಕುಲದ ಉದ್ಧಾರಕ್ಕಾಗಿ ಜನಿಸಿದ ಮಹಾನ್ ದಾರ್ಶನಿಕರು. ಮನುಷ್ಯನಲ್ಲಿರುವ ದೈವತ್ವವನ್ನು ಗುರುತಿಸಿ, ಜಾತಿ-ಮತಗಳ ಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ಸತ್ಯವನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ನಾರಾಯಣಗುರುಗಳು ಎಂದು ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶಿವರಾಜ್ ಗಟ್ಟಿ ಹೇಳಿದರು.

ನಾರಾಯಣಗುರುಗಳ ಆಧ್ಯಾತ್ಮಿಕ ಚಿಂತನೆ ಮತ್ತು ಸಮಾಜ ಸುಧಾರಣೆಯ ಕಾರ್ಯಗಳನ್ನು ವಿವರಿಸಿದ ಅವರು, ದೇವರನ್ನು ದೇವಾಲಯಗಳಲ್ಲಿ ಮಾತ್ರ ಹುಡುಕದೆ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ದೈವತ್ವವನ್ನು ಕಾಣುವ ವಿಶಾಲ ದೃಷ್ಟಿಕೋನವನ್ನು ಗುರುಗಳು ಬೋಧಿಸಿದರು. ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವುದೇ ನಿಜವಾದ ಧರ್ಮ ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ಜಗತ್ತಿಗೆ ತೋರಿಸಿಕೊಟ್ಟರು ಎಂದು ತಿಳಿಸಿದರು.
ಅವರು ಅಕ್ಟೋಬರ್ 23 ರಂದು ಸದಾನಂದ ಪೂಜಾರಿ ಅಂಗಡಿಪಲ್ಕೆ ವಾಮದಪದವು ಇವರ ನಿವಾಸದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 83 ರಲ್ಲಿ ಗುರುಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ದ್ವಿತೀಯ ಉಪಾಧ್ಯಕ್ಷ ಹರೀಶ್ ಅಜಕಲ , ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ , ಭಜನಾ ಪ್ರಶಿಕ್ಷರು ಮತ್ತು ಸಂಗೀತ ಗುರುಗಳಾದ ಸತೀಶ್ ಪೂಂಜ ವಾಮದಪದವು, ನಿರ್ದೇಶಕರಾದ ಶೇಖರ್ ಅಗಲ್ದೋಡಿ, ನವೀನ್ ಕುಡ್ಮೇರು, ಸಂಘಟನಾ ಕಾರ್ಯದರ್ಶಿ ಸರಿತಾ ಮೂರ್ಜೆ , ಸದಸ್ಯರಾದ ಪ್ರಶಾಂತ್ ಏರಮಲೆ, ಯಶೋಧರ ಕಡಂಬಳಿಕೆ, ಯತೀಶ್ ಬೊಳ್ಳಾಯಿ , ಮಧುಸೂದನ್ ಮಧ್ವ, ಲಿತೀಶ್ ವಾಮದಪದವು , ಶಶಾಂಕ್ ವಾಮದಪದವು ಹಾಗೂ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ., ಭಾಗವಹಿಸಿದ್ದರು.

ಕಾರ್ಯಕ್ರಮದ ಭಜನಾ ಸಂಕೀರ್ತನೆಯಲ್ಲಿ ಸಾತ್ವಿಕ್ ದೇರಾಜೆ , ಕಾರ್ತಿಕ್ ದೇರಾಜೆ ಸಂಗೀತ ಸೇವೆ ನೀಡಿದರು.
ಆತಿಥ್ಯ ವಹಿಸಿದ ಸದಾನಂದ ಪೂಜಾರಿ ಇವರು ಆಗಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು.ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಕಿರಣ್ ಪೂಂಜರಕೊಡಿ
ಕಾರ್ಯಕ್ರಮ ನಿರೂಪಿಸಿದರು.





