ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟು ಗ್ರಾಮದಲ್ಲಿ ಮನಮಿಡಿಯುವ ಘಟನೆಯೊಂದು ನಡೆದಿದೆ. ಕಳೆದ ಕೆಲವು ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 7 ವರ್ಷದ ಬಾಲಕ ಕುಶಾನ್ ಗೌಡ ಇಂದು ಚಿಕಿತ್ಸೆ ಫಲಕಾರಿಯಾಗದೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಗೋಳಿತ್ತೊಟ್ಟು ಗ್ರಾಮದ ಡೆಬ್ಬೇಲಿ ಗಣೇಶ ನಿವಾಸದ ಲೋಹಿತ್ ಗೌಡ ಮತ್ತು ಸುಪ್ರಿಯಾ ದಂಪತಿಯ ಪುತ್ರ ಕುಶಾನ್ ಗೌಡ, ಗೋಳಿತ್ತೊಟ್ಟು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.



ವರ್ಷದ ಹಿಂದೆ ಬಾಲಕ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಪೋಷಕರು ಸತತವಾಗಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ತನ್ನ ಸ್ವಗೃಹದಲ್ಲೇ ಕೊನೆಯುಸಿರೆಳೆದಿದ್ದಾನೆ. ಮೃತ ಬಾಲಕ ತಂದೆ, ತಾಯಿ, ಅಜ್ಜ ವೆಂಕಪ್ಪ ಗೌಡ ಮತ್ತು ಅಜ್ಜಿ ಜಾನಕಿ ಅವರನ್ನು ಅಗಲಿದ್ದಾನೆ.






