ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಸಂವಹನ ವೃದ್ಧಿಯ ಬೆಳವಣಿಗೆಗಾಗಿ ಆಯೋಜಿಸಲಾಗಿದ್ದ “ಅಕೊಲೆಡ್ಸ್” ತರಗತಿಗಳ ಸಮಾರೋಪ ಕಾರ್ಯಕ್ರಮ ನಡೆಯಿತು.

2025-26ನೇ ಶೈಕ್ಷಣಿಕ ಸಾಲಿನ ಶಾಲಾ ವಿದ್ಯಾರ್ಥಿಗಳಿಗೆ ಮಂಗಳೂರಿನ ಅಕೊಲೆಡ್ಸ್ ಅಕಾಡೆಮಿಯು ಅಕೊಲೆಡ್ಸ್ ತರಗತಿಗಳನ್ನು ನಡೆಸಿದ್ದು, ಆ ತರಗತಿಗಳಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಮಂಗಳೂರಿನ ಅಕೊಲೆಡ್ಸ್ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಕೃಷ್ಣಪ್ರಸಾದ್ ಅಡಪ್ಪ, ಕಾರ್ಯಕ್ರಮದ ಸಂಯೋಜಕರಾದ ಶಿಕ್ಷಕಿ ಶ್ರೀಮತಿ ನೀತು ಪ್ರಸಾದ್, ಶಿಕ್ಷಕಿ ಶ್ರೀಮತಿ ಮಧುರ ಹಾಗೂ ತರಗತಿ ನಡೆಸಿದ ಸಂಪನ್ಮೂಲ ವ್ಯಕ್ತಿಗಳಾದ ವಿನೀತ, ಅನುಷಾ, ಪ್ರಗ್ನ್ಯ ಹಾಗೂ ಸಂಜನಾ ಆಸಿನರಿದ್ದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಶೈಕ್ಷಣಿಕ ಸಂಯೋಜಕಿ ಶ್ರೀಮತಿ ಸುಮಾ ಶ್ರೀನಾಥ್ ವಹಿಸಿದ್ದರು.







