ಧರ್ಮಸ್ಥಳ: ಸಾಧನೆಗೆ ಛಲವೊಂದಿದ್ದರೆ ಸಾಕು, ಆಕಾಶ ಮುಟ್ಟುವ ಎತ್ತರಕ್ಕೆ ಬೆಳೆಯಬಹುದು ಎಂಬುದನ್ನು ಧರ್ಮಸ್ಥಳದ ಪ್ರತಿಭೆಯೊಬ್ಬರು ಸಾಬೀತುಪಡಿಸಿದ್ದಾರೆ.

ಧರ್ಮಸ್ಥಳದ ಉಮೇಶ್ ಪ್ರಭು ಮತ್ತು ದೀಪಿಕಾ ಪ್ರಭು ದಂಪತಿಯ ಪುತ್ರಿ ಕು. ಅನನ್ಯ ಪ್ರಭು ಅವರು ಜಾಗತಿಕ ಮಟ್ಟದ ಪ್ರತಿಷ್ಠಿತ ‘ಮಹೀಂದ್ರಾ ಏರೋಸ್ಪೇಸ್’ (Mahindra Aerospace) ಸಂಸ್ಥೆಯಲ್ಲಿ ಉನ್ನತ ಮಟ್ಟದ ಉದ್ಯೋಗಕ್ಕೆ ನೇಮಕಗೊಳ್ಳುವ ಮೂಲಕ ಹೆಮ್ಮೆಯ ಸಾಧನೆ ಮಾಡಿದ್ದಾರೆ.
ಕು. ಅನನ್ಯ ಪ್ರಭು ಅವರು ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಉಜಿರೆಯ ಪ್ರಸಿದ್ಧ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDM) ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಪೂರೈಸಿದ್ದರು.
ಬಳಿಕ ತಾಂತ್ರಿಕ ಶಿಕ್ಷಣದತ್ತ ಮುಖ ಮಾಡಿದ ಇವರು, ಮೂಡಬಿದ್ರೆಯ ಮೈಟ್ (MITE ) ವಿದ್ಯಾಸಂಸ್ಥೆಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ (Aeronautical Engineering) ಪದವಿ ಪಡೆದರು. ವಿಶೇಷವೆಂದರೆ, ತಮ್ಮ ಬ್ಯಾಚ್ನಲ್ಲಿ ಇಡೀ ಕಾಲೇಜಿಗೆ ಮೊದಲನೇ ಸ್ಥಾನ (Topper) ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಪರಿಚಯಿಸಿದ್ದರು.







