ನಡ : ನಡ ವಿಭಾಗದಲ್ಲಿ ನಿರ್ಮಿಸುತ್ತಿರುವ ಹಿಂದೂ ರುದ್ರಭೂಮಿ ಕಟ್ಟಡ ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 250000/- ರೂ ಮೊತ್ತದ ಚೆಕ್ ನ್ನು ಯೋಜನೆಯ ತಾಲ್ಲೂಕಿನ ಮಾನ್ಯ ಯೋಜನಾಧಿಕಾರಿ ಗಳಾದ ಶ್ರೀಯುತ ಯಶೋಧರ್ ಇವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಯುತ ತಾರಾನಾಥ್ ಮತ್ತು ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷರಾದ ಶ್ರೀಯುತ ವಿಜಯ ಗೌಡ,ಇವರಿಗೆ ಚೆಕ್ ನ್ನು ವಿತರಿಸಿದರು.




ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿರುವ ಗೌರವಾನ್ವಿತರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಂಜುಳಾ,.ಹಿಂದೂ ರುದ್ರಭೂಮಿ ಸಮಿತಿ ಕಾರ್ಯದರ್ಶಿ ಗಳಾದ ವಸಂತ ಗೌಡ, ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಯುತ ವಿಜಯ ಗೌಡ, ವಲಯದ ಮೇಲ್ವಿಚಾರಕರು ಶ್ರೀಯುತ ಸುಶಾಂತ್,ಬೆಳ್ತಂಗಡಿ ಸಿ ಎ. ಬ್ಯಾಂಕಿನ ಅಧ್ಯಕ್ಷರಾದ ಶ್ರೀಯುತ ಅಜಿತ್ ಆರಿಗ,
ಗಣ್ಯರಾದ ಶ್ಯಾಮ್ ಸುಂದರ ಗೌಡ, ಚೆನ್ನಕೇಶವ ಗೌಡ, ತನಿಯಪ್ಪ ಗೌಡ ಪಂಚಾಯತ್ ಮಾಜಿ ಸದಸ್ಯರು ಎನ್ ಬಿ ಹರಿಶ್ಚಂದ್ರ, ಶೌರ್ಯ ಘಟಕದ ಪ್ರತಿನಿಧಿ ಮಂಜುನಾಥ್, ಮೋಹನ್ ಗೌಡ,ನಡ -ಕನ್ಯಾಡಿ ಒಕ್ಕೂಟದ ಅಧ್ಯಕ್ಷರಾದ ವಸಂತ ಶೆಟ್ಟಿ, ಶ್ರೀಮತಿ ಗೀತಾ, ಸೇವಾಪ್ರತಿನಿಧಿ ಗಳಾದ ಕು ವಸಂತಿ, ಶ್ರೀಮತಿ ಪುಷ್ಪಾ, ಪಂಚಾಯತ್ ನ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.









