ಶಿರ್ಲಾಲು: ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಶಿರ್ಲಾಲು ಇಲ್ಲಿ ಈ ದಿನ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಬೆಳ್ತಂಗಡಿ ಇದರ ವತಿಯಿಂದ ಇಲ್ಲಿನ ಸಿಬ್ಬಂದಿಗಳಾದ, ಶ್ರೀಯುತ ಕೃಷ್ಣ, ಜಯಲಕ್ಷ್ಮಿ. ಇವರ ನೇತೃತ್ವದಲ್ಲಿ 6ರಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಾಲಾ ಬ್ಯಾಗ್ ನೀಡಲಾಯಿತು.




ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ಕರಿಯಪ್ಪ ಎ.ಕೆ ಉಪಸ್ಥಿತರಿದ್ದರು.
ಅದೇ ರೀತಿ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.






