ಧರ್ಮಸ್ಥಳ: ಕರಾವಳಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಅತ್ಯಂತ ಮಹತ್ವದ ದಿನವಾದ ‘ಪತ್ತನಾಜೆ’ (ಹತ್ತನಾವಧಿ ಉತ್ಸವ) ಮೇ 25 ರಂದು ಕ್ಷೇತ್ರ ಧರ್ಮಸ್ಥಳದಲ್ಲಿ ಜರುಗಲಿದೆ.

ಪತ್ತನಾಜೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಹಾಗೂ ಧಾರ್ಮಿಕ ನಿಯಮಗಳು ಜಾರಿಗೆ ಬರಲಿವೆ. ಮುಂದೆ ದೀಪಾವಳಿ ವರೆಗೆ ದೇವಸ್ಥಾನದಲ್ಲಿ ಉತ್ಸವ, ರಂಗಪೂಜೆ ಮೊದಲಾದ ವಿಶೇಷ ಸೇವೆಗಳು ನಡೆಯುವುದಿಲ್ಲ. ಧರ್ಮಸ್ಥಳ ಯಕ್ಷಗಾನ ಮಂಡಳಿಯ ಕಲಾವಿದರು ಮೂರು ದಿನ ಸೇವೆ ಬಯಲಾಟ ಪ್ರದರ್ಶನ ನೀಡಿ ಪ್ರಸಕ್ತ ವರ್ಷದ ಸೇವಾ ಬಯಲಾಟ ಪ್ರದರ್ಶನಕ್ಕೆ ಮಂಗಳ ಹಾಡಲಾಗುವುದು.








